ಉಡುಪಿ:ನಟ, ಕೇಂದ್ರ ಸಚಿವ ಸುರೇಶ್ ಗೋಪಿ ಶ್ರೀಕೃಷ್ಣ ಮಠಕ್ಕೆ ಭೇಟಿ- ದೇವರ ದರ್ಶನ

ಉಡುಪಿ: ಪುತ್ತಿಗೆ ಪರ್ಯಾಯ ಮಂಗಳೋತ್ಸವ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣಮಠಕ್ಕೆ ಮಲೆಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್‌ ಗೋಪಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಟ ಹಾಗೂ ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ ನೀಡಿದ್ದ ಸುರೇಶ್‌ ಗೋಪಿ ಅವರು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ಕೇಂದ್ರ ಸಚಿವರಿಗೆ ಮಠದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥರು ವಿಶೇಷ ಗೌರವ ಸಲ್ಲಿಸಿದರು.