ಉಡುಪಿ: ಜೈ ತುಳುನಾಡ್ (ರಿ.) ಉಡುಪಿ ಘಟಕದ 2026-2027ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಸಂತೋಷ್ ಎನ್.ಎಸ್. ಕಟಪಾಡಿ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ಞಾಶ್ರೀ ಎಂ. ಕೊಡವೂರು ಆಯ್ಕೆಯಾಗಿದ್ದಾರೆ.
ಉಡುಪಿಯ ಹಿಂದಿ ಪ್ರಚಾರ ಭವನದಲ್ಲಿ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಇತರೆ ಪದಾಧಿಕಾರಿಗಳ ವಿವರ:
ಉಪಾಧ್ಯಕ್ಷರಾಗಿ ವಿರೇಂದ್ರ ಶೆಟ್ಟಿ ಕೊಡಂಕೂರು, ಜೊತೆ ಕಾರ್ಯದರ್ಶಿಯಾಗಿ ಐಶ್ವರ್ಯ ಶೆಟ್ಟಿ ಇನ್ನಂಜೆ, ಕೋಶಾಧಿಕಾರಿಯಾಗಿ ಅಂಬಿಕಾ ರಾವ್ ಕನ್ನರ್ಪಾಡಿ, ಜೊತೆ ಕೋಶಾಧಿಕಾರಿಯಾಗಿ ಡಾ. ನಿತೇಶ್ ಎಸ್.ಎ ಕೊರಂಗ್ರಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರಿಯ ಅಖಿಲೇಶ್ ದೇವಾಡಿಗ ಬೈಲೂರ್, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಶಿವಪ್ರಸಾದ್ ದೇವಾಡಿಗ ಮಣಿಪಾಲ್ ಅವರು ಆಯ್ಕೆಯಾಗಿದ್ದಾರೆ.
ಮತದಾನ ಪ್ರಕ್ರಿಯೆಯನ್ನು ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕುಮಾರ್ ಕೊಡವೂರ್ ನಡೆಸಿಕೊಟ್ಟರು.2024-2025 ನೇ ಸಾಲಿನಲ್ಲಿ ನಡೆದ ಸಂಘದ ಕಾರ್ಯಚಟುವಟಿಕೆಗಳ ವರದಿಯನ್ನು ಜೊತೆ ಕಾರ್ಯದರ್ಶಿ ಸುಪ್ರೀತಾ ಪುತ್ರನ್ ಮಲ್ಪೆ ಮತ್ತು ಸಮಿತಿಯ ವಾರ್ಷಿಕ ಲೆಕ್ಕಾಚಾರದ ವರದಿಯನ್ನು ಕೋಶಾಧಿಕಾರಿ ಸುಪ್ರಿಯಾ ಅಖಿಲೇಶ್ ದೇವಾಡಿಗ ಬೈಲೂರು ಮಂಡಿಸಿದರು. ಸಂಘದ ಅಧ್ಯಕ್ಷೆ ಸುಶೀಲಾ ಜಯಕರ್ ಕೊಡವೂರ್ ಕಳೆದ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಕೀಲ ರಮೇಶ್ ದೇವಾಡಿಗ ಬೈಲೂರು , ಶೇಖರ್ ಮಲ್ಪೆ ಹಾಗೂ ಜೈ ತುಳುನಾಡ್ ಉಡುಪಿ ಘಟಕದ ಸದಸ್ಯರು ಉಪಸ್ಥಿತರಿದ್ದರು.
















