ಉಡುಪಿಯಲ್ಲಿ ನಡೆದ ಫುಡ್ ಕಾರ್ನಿವಲ್ ಕಾರ್ಯಕ್ರಮವನ್ನು ನಗರದ ಪ್ರಮುಖ ಫುಡ್ ಬ್ಲಾಗರ್ಗಳು ಹಾಗೂ ಡಿಜಿಟಲ್ ಕ್ರಿಯೇಟರ್ಗಳು ಸಂಯುಕ್ತವಾಗಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ಲಾಗರ್ಗಳು ಕಾರ್ನಿವಲ್ನ ವೈಶಿಷ್ಟ್ಯ, ವಿವಿಧ ರುಚಿಗಳ ಆಹಾರ ಸ್ಟಾಲ್ಗಳು ಹಾಗೂ ಯುವಜನರಿಗೆ ದೊರೆಯುವ ಸೃಜನಾತ್ಮಕ ವೇದಿಕೆ ಕುರಿತು ಮಾತನಾಡಿದರು.

ಇಂದು ಮತ್ತು ನಾಳೆ ನಡೆಯಲಿರುವ ಈ ಫುಡ್ ಕಾರ್ನಿವಲ್ನಲ್ಲಿ 60ಕ್ಕೂ ಹೆಚ್ಚು ಆಹಾರ ಸ್ಟಾಲ್ಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ಕುಟುಂಬಗಳಿಗೆ ವಿವಿಧ ಆಕರ್ಷಣೆಗಳನ್ನು ಹೊಂದಿದ್ದು, ನಗರದ ಆಹಾರಾಸಕ್ತರಿಗೆ ಹೊಸ ಅನುಭವವನ್ನು ನೀಡಲಿದೆ.
















