ಉಡುಪಿ:ಜ.15 ರಂದು “ಮಹಿಳೆಯರಲ್ಲಿ ಕ್ಯಾನ್ಸರ್” ಕುರಿತು ಜಾಗೃತಿ ಕಾರ್ಯಗಾರ

ಉಡುಪಿ:ಉಡುಪಿ ರೋಟರಿ, ಇಂಚರಾ ಸರ್ಜಿಕಲ್ ಕ್ಲಿನಿಕ್ ಮತ್ತು ಶ್ರೀ ವೈ.ಎಲ್.ಎನ್. ಜ್ಯೋತಿಸ್ಕ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಉಡುಪಿ ಅವರ ಸಂಯುಕ್ತ ಆಶ್ರಯದಲ್ಲಿ “ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳು” ಎಂಬ ವಿಷಯದ ಮೇಲೆ ಜಾಗೃತಿ ಮಾತುಕತೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸಕ ಡಾ. ವೈ. ಸುದರ್ಶನ್ ರಾವ್ ಅವರು ಮಹಿಳಾ ಕ್ಯಾನ್ಸರ್‌ಗಳ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮವು 15-01-2026, ಗುರುವಾರ ಸಂಜೆ 6.45ಕ್ಕೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ಹೈಸ್ಕೂಲ್‌ನ ರೋಟರಿ ಹಾಲ್‌ನಲ್ಲಿ ಜರುಗಲಿದೆ.

ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ ಸಂಪರ್ಕಿಸಿ: 7676799859