ಮಣಿಪಾಲ: ಜೇಸಿ. ಜ್ಯೋತಿ ಪ್ರಶಾಂತ್ ಅವರು ಜೆಸಿಐ ಭಾರತದ ರಾಷ್ಟ್ರೀಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರಿಗೆ ಅಧಿಕೃತವಾಗಿ ಪದವಿ ಪ್ರದಾನ ಮಾಡಲಾಯಿತು.

ಎಚ್.ಆರ್. ಪ್ರೊಫೆಷನಲ್ ಆಗಿರುವ ಅವರು ಅನೇಕ ಕಂಪನಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಹಿಳಾ ಸಬಲೀಕರಣ, ಜೀವನ ಕೌಶಲ್ಯಗಳು ಮತ್ತು ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿಗಳನ್ನು ಆಯೋಜಿಸುತ್ತಿದ್ದಾರೆ. ಪ್ರಸ್ತುತ ಅವರು ಮಣಿಪಾಲದ ಮಾಹೆ (MAHE) ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿನಿಯಾಗಿ ತೊಡಗಿಸಿಕೊಂಡಿದ್ದಾರೆ.

















