ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ 2016, ಘನತ್ಯಾಜ್ಯ ನಿರ್ವಹಣೆ ಉಪನಿಯಮ 2019, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ಹಾಗೂ (c&d waste) 2016 ರ ನಿಯಮದ ಉಲ್ಲಂಘನೆ ಮಾಡಿದಲ್ಲಿ ಸರಕಾರದ ಆದೇಶದಂತೆ ನಿಗದಿತ ದಂಡ ವಿಧಿಸಲಾಗುವುದು.
ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ/ಒಣಕಸವನ್ನಾಗಿ ವಿಂಗಡಿಸಿ ಘನತ್ಯಾಜ್ಯ ವಾಹನಕ್ಕೆ ನೀಡುವಂತೆ, ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ, ಶೌಚಾಲಯ ಗುಂಡಿ ಸ್ವಚ್ಛ
ಮಾಡಲು ಕಡ್ಡಾಯವಾಗಿ ಸಕ್ಕಿಂಗ್ ಯಂತ್ರವನ್ನು ಬಳಸುವಂತೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ IPGRS ವೆಬ್ಸೈಟ್
ನಲ್ಲಿ ದೂರು ದಾಖಲಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
















