ಉಡುಪಿ: ಬೆಂಗಳೂರಿನ ‘ವಂದೇ ಭಾರತ್ ಲಲಿತಾ ಕಲಾ ಅಕಾಡೆಮಿ’ಯವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನಾ ಸಭಾಂಗಣದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಂಕ್ರಾಂತಿ ಸಂಭ್ರಮ 2026 ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮ ಟೈಲರಿಂಗ್ ಕ್ಷೇತ್ರದಲ್ಲಿ ರಾಜ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಉಡುಪಿ ತಾಲೂಕಿನ 80 ಬಡಗು ಬೆಟ್ಟು ಗ್ರಾಮ ಕಬ್ಯಾಡಿ ನಿವಾಸಿ ಶ್ರೀಮತಿ ಮಾಲತಿ ಸುರೇಶ್ ಅವರಿಗೆ ಗಣ್ಯರ ಉಪಸ್ಥಿಯಲ್ಲಿ ‘ಕರುನಾಡ ಕಾಯಕ ಯೋಗಿ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶ್ರೀಮತಿ ಮಾಲತಿ ಸುರೇಶ್ ರವರು ಬಿಜೆಪಿ ಗ್ರಾಮ ಮಟ್ಟದ ಕಾರ್ಯಕರ್ತೆಯಾಗಿ 80 ಬಡಗು ಬೆಟ್ಟು ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ ಕೆಳ ಅತ್ರಾಡಿಯಲ್ಲಿ ತನ್ನದೇ ಆದ ಟೈಲರಿಂಗ್ ಉದ್ಯಮವನ್ನು ಸ್ಥಾಪನೆ ಮಾಡಿ ಸಾವಿರಾರು ಮಹಿಳೆಯರಿಗೆ ಟೈಲರಿಂಗ್ ವಿದ್ಯೆಯನ್ನು ಕಲಿಸುತಿದ್ದಾರೆ. ಜತೆಗೆ ಹಲವಾರು ಮಹಿಳೆಯರನ್ನು ಸೇರಿಸಿಕೊಂಡು ಕುಣಿತ ಭಜನೆಯ ತಂಡವನ್ನು ರಚನೆ ಮಾಡಿ ಹಲವಾರು ದೇವಸ್ಥಾನಗಳಿಗೆ ಹೋಗಿ ಭಜನೆ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೆ ಮಹಿಳಾ ಚಂಡೆ ಬಳಗವನ್ನು ರಚಿಸಿದ್ದ ಇವರು ಸಾಂಸ್ಕೃತಿಕ ವಿಭಾಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.
















