ನೋಡಿದ  ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತೆ ಈ ಅಚ್ಚರಿಯ ಕನ್ನಡಕ :AI ಕನ್ನಡಕದ ಮಹಿಮೆ ಕೇಳಿ!

ವಾಷಿಂಗ್ಟನ್‌ನ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ತಂತ್ರಜ್ಞಾನ ಆಧಾರಿತ ಕನ್ನಡಕಕ್ಕೆ ‘ಪಿಕ್ಸ್’ಎಂಬ ಹೆಸರನ್ನು ನೀಡಿದ್ದಾರೆ. ಈ ಕನ್ನಡಕವನ್ನು ಧರಿಸಿದ ವ್ಯಕ್ತಿ ನೋಡಿದ ಮುಖಗಳು, ಸ್ಥಳಗಳು ಹಾಗೂ ವಸ್ತುಗಳನ್ನು ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಗುರುತಿಸಿ ಸಂಗ್ರಹಿಸಿಡುತ್ತದೆ.

ನಂತರ ಅಗತ್ಯ ಬಂದಾಗ ಆ ಮಾಹಿತಿಯನ್ನು ಬಳಕೆದಾರರಿಗೆ ನೆನಪಿಸುವ ಸಾಮರ್ಥ್ಯ ಈ ಕನ್ನಡಕಕ್ಕಿದೆ. ದಿನವಿಡೀ ಧರಿಸಿದರೂ ಅಡಚಣೆಯಾಗದಂತೆ ವಿನ್ಯಾಸಗೊಳಿಸಿರುವುದು ಇದರ ವಿಶೇಷತೆ.

ಸಂಶೋಧಕರ ಪ್ರಕಾರ, ಈ ಸ್ಮಾರ್ಟ್ ಕನ್ನಡಕ ಅಲ್ಜೈಮರ್ ಸೇರಿದಂತೆ ನೆನಪಿನ ಶಕ್ತಿ ಕುಂಠಿತವಾಗುವ ಸಮಸ್ಯೆ ಹೊಂದಿರುವವರಿಗೆ ಬಹುಮಟ್ಟಿಗೆ ಸಹಾಯಕವಾಗಲಿದೆ. ಭವಿಷ್ಯದಲ್ಲಿ ಇದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸದ್ಯ ಅಮೆರಿಕಾದಲ್ಲಿ ಮಾತ್ರ ಇದು ಲಭ್ಯವಿದೆ. ಈ ಕನ್ನಡಕ  ಒಎಸ್ ಮೂಲಕ ಕಾರ್ಯ ನಿರ್ವಹಿಸುತ್ತದೆ, ಕನ್ನಡಕ್ಕೆ ಲಾಕ್ ವ್ಯವಸ್ಥೆ ಕೂಡ ಇದ್ದು,ಲಾಕ್ ಮಾಡಿದರೆ ಇದನ್ನು ಬೇರೆಯರು ಬಳಸಲು ಸಾಧ್ಯವಿಲ್ಲ, ಅಲ್ಲದೇ ಇದರ ಬ್ಯಾಟರಿ 12 ಗಂಟೆ ಬಾಳಿಕೆ ಬರುತ್ತದೆ. ಅಮೆರಿಕಾದಲ್ಲಿ ಇದರ ಬೆಲೆ ಸುಮಾರು  ರೂ 72,000 ರೂಪಾಯಿ ಅಂತೆ, ಸದ್ಯ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು