ಹೆರ್ಗ ನಾರಾಯಣ ಪ್ರಭು ನಿಧನ

ಉಡುಪಿ:ಹೆರ್ಗ ನಾರಾಯಣ ಪ್ರಭು (82 ವರ್ಷ)ರವರು ಇಂದು ನಿಧನರಾದರು. ಶ್ರೀಯುತರು ಮಣಿಪಾಲ ಎಂಐಟಿ ವರ್ಕ್ ಶಾಪ್ ನಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದರು .

ಶ್ರೀಯುತರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹೆರ್ಗ ಶ್ರೀ ಉಮಾ ಮಹೇಶ್ವರ ಯಕ್ಷಗಾನ ಮಂಡಳಿ ಶಿವಪಾಡಿಯಲ್ಲಿ ಸ್ಥಾಪಕ ಸದಸ್ಯರಾಗಿದ್ದು ಅನೇಕ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಸಮಾಜಸೇವೆಯಲ್ಲೂ ಮುಂದಿದ್ದು ಅನೇಕ ಜನರ ಅಂತ್ಯ ಸಂಸ್ಕಾರವನ್ನು ತಮ್ಮ ಮುಂದಾಳತ್ವದಲ್ಲಿ ನೆರವೇರಿಸಿದ್ದರು. ಸುಮಾರು 50 ವರ್ಷಗಳ ಕಾಲ ಗಣೇಶ ಚತುರ್ಥಿಗೆ ಆವೆ ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ಮಾಡಿಕೊಡುತ್ತಿದ್ದರು.