ಕುರ್ಚಿಯಲ್ಲಿ ಕುಳಿತಿದ್ದಾಗಲೇ ದಿಢೀರ್ ಅಸ್ವಸ್ಥಗೊಂಡು ಹೋಮ್ ನರ್ಸ್ ಸಾವು

ಉಡುಪಿ: ಕುರ್ಚಿಯ ಮೇಲೆ ಕೂತಲ್ಲಿಯೇ ಹೋಮ್ ನರ್ಸೊಬ್ಬರು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಗರಡಿ ರಸ್ತೆಯಲ್ಲಿ ಸಂಭವಿಸಿದೆ.
ಹೋಮ್ ನರ್ಸ್ ಪ್ರದೀಪ್ ಅಜ್ಜರಕಾಡು (55) ಎಂದು ಗುರುತಿಸಲಾಗಿದೆ.

ಇವರು ತನ್ನ ಬಾಡಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಇದೇ ವೇಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪ್ರದೀಪ್ ಅವರನ್ನು ಅಬ್ಯುಂಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಪರಿಕ್ಷೀಸಿದ ವೈದ್ಯರು ಪ್ರದೀಪ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತ ಪ್ರದೀಪ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಒಳಕಾಡು ನೇತೃತ್ವದಲ್ಲಿ ನಡೆಯುವ ಅನಾಥ ಶವಗಳ ಅಂತ್ಯಸಂಸ್ಕಾರ ನೇರವೆರಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು.