ಉಡುಪಿ: ಭೀಮಾ ಜ್ಯವೆಲ್ಲರ್ಸ್‌ನಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ

ಉಡುಪಿ: ಭೀಮಾ ಜ್ಯವೆಲ್ಲರ್ಸ್ ಉಡುಪಿ ಇದರ ಸಿಎಸ್‌ಆರ್ ನಿಧಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಹೇಂದ್ರ ಕಂಪನಿಯ ಬೊಲೆರೋ ಜೀಪ್‌ನ್ನು ಗುರುವಾರ ನೀಡಲಾಯಿತು.

ಭೀಮ ಜ್ಯುವೆಲ್ಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಅಪರೇಷನ್ ಮುಖ್ಯಸ್ಥ ಗುರುಪ್ರಸಾದ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಜೀಪಿನ ಕೀಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರವಿ ಕುಮಾರ್ ಹಾಗೂ ಭೀಮ ಜ್ಯುವೆಲರ್ಸ್ ಉಡುಪಿ ಬ್ರ್ಯಾಂಚ್ ಮ್ಯನೇಜರ್ ಆಶಿಶ್, ಡೆಪ್ಯುಟಿ ಮ್ಯಾನೇಜರ್ ಸುಧೀರ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಪ್ರಸನ್ನ ಕುಮಾರ್, ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ನ ಮಂಜುನಾಥ ಅಮೀನ್, ಸೇಲ್ಸ್ ಮತ್ತು ಅಪರೇಶನ್ ಹೆಡ್ ರಾಘವೆಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.