ವಿಶ್ವ ಮಟ್ಟದ ಚೆಸ್ ಚಾಂಪಿಯನ್ ಪಂದ್ಯದಲ್ಲಿ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಸಾಧನೆ

ಉಡುಪಿ: ಬಿಹಾರದಲ್ಲಿ ಮಾರ್ಚ್ 25ರಿಂದ 29 ಮಾರ್ಚ್ ವರೆಗೆ ನಡೆದ ರಾಷ್ಟ್ರೀಯ ಮಟ್ಟದ ಮಹಿಳಾ ಅಮೆಚೂರ್ ಚದುರಂಗ ಸ್ಪರ್ಧೆಯಲ್ಲಿ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು ದ್ವಿತೀಯ ಸ್ಥಾನ ಪಡೆದು, ವಿಶ್ವ ಮಟ್ಟದ ಮಹಿಳಾ ಅಮೆಚೂರ್ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿ, ನವೆಂಬರ್ 4ನೇ ತಾರೀಕು ರಿಂದ 14ನೇ ತಾರೀಖಿನ ವರೆಗೆ ಸರ್ಬಿಯಾದ ವೃನ್ಜಾಕ್ ಬಂಝ ದಲಿ ನಡೆದ ವಿಶ್ವ ಮಹಿಳಾ ಅಮೆಚೂರ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 1700 ರ ಒಳಗಿನ FIDE ರೇಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ. ಇವರು ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದಾರೆ.

ಇವರ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಿನ್ಸಿಪಾಲ್ , ಸಿಬ್ಬಂದಿ ವರ್ಗ ಬೋಧಕ ಬೋಧಕೇತರ ವರ್ಗ ದವರು ಗುರುತಿಸಿ ಇವರಿಗೆ ಲ್ಯಾಪ್ ಟಾಪ್ ಅನ್ನು ಉಚಿತವಾಗಿ ನೀಡಿ ಅದರ ಜೊತೆಗೆ ಕಾಲೇಜ್ ಫೀಸ್ನಲ್ಲಿ 50 ಪ್ರತಿಶತ ರಿಯಾಯಿತಿ ನೀಡಿ ಪ್ರೋತ್ಸಾಹಿಸಿದ್ದಾರೆ.
ಇವರು ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡಕ ಹಾಗೂ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಶಾಲೆ ಕಾರ್ಕಳ ಇದರ ಹಳೆ ವಿದ್ಯಾರ್ಥಿನಿ ಯಾಗಿರುತ್ತಾರೆ . ಪರ್ಕಳದ ಉಮೇಶ್ ನಾಯಕ್ ಮತ್ತು ಆಶಾ ನಾಯಕ್ ದಂಪತಿಯ ಪುತ್ರಿ. ಇವರ ಅಣ್ಣ ಶ್ರೀಶ ಕೂಡಾ ಉತ್ತಮ ಚೆಸ್ ಆಟಗಾರರಾಗಿದ್ದಾರೆ. ಮಂಗಳೂರಿನ ಡೆರಿಕ್ ಚೆಸ್ ಶಾಲೆಯ ಡೆರಿಕ್ ಪಿಂಟೋ ರವರು ಚೆಸ್ ಬಗ್ಗೆ ಇವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.