ಉಡುಪಿ:ಪ್ರಾಣಿ ಸಂರಕ್ಷಣಾ ಸೇವೆ ನೀಡಲು ಅರ್ಜಿ ಆಹ್ವಾನ

ಉಡುಪಿ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿಯಂತ್ರಣ, ಪಾಲನೆ ಮತ್ತು ಪ್ರಾಣಿ ಸಂರಕ್ಷಣಾ ಸೇವೆಗಳನ್ನು ನೀಡಲು ಆಸಕ್ತಿವುಳ್ಳ ಅನುಭವ ಹೊಂದಿರುವ ಅರ್ಹ ಅನುಭವಿ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಸಂಸ್ಥೆಗಳು ಅಥವಾ ವ್ಯಕ್ತಿಗಳು ತಮ್ಮ ಜಾಗದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಾಣ ಹಾಗೂ ಸಂತಾನಹರಣ ಚಿಕಿತ್ಸೆ
ಕೈಗೊಳ್ಳುವುದರೊಂದಿಗೆ ಪಾಲನಾ ಪೊಷಣೆಯನ್ನು ನಿರ್ವಹಿಸಬೇಕು ಅಥವಾ ಆಸಕ್ತ ಸಂಸ್ಥೆಗಳು ಅಥವಾ ವ್ಯಕ್ತಿಗಳು ಪುರಸಭಾ ವತಿಯಿಂದ
ನೀಡುವ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಾಣ ಹಾಗೂ ಸಂತಾನಹರಣ ಚಿಕಿತ್ಸೆ ಕೈಗೊಳ್ಳುವುದರೊಂದಿಗೆ ಪಾಲನಾ
ಪೊಷಣೆಯನ್ನು ನಿರ್ವಹಿಸಬೇಕು. ಕುಂದಾಪುರ ಪುರಸಭಾ ವತಿಯಿಂದ ಬೀದಿ ನಾಯಿಗಳನ್ನು ದತ್ತು ನೀಡುವ ಪ್ರಕ್ರಿಯ ಚಾಲ್ತಿಯಲ್ಲಿದ್ದು, ಆಸಕ್ತ
ಸಂಸ್ಥೆಗಳು ಅಥವಾ ವ್ಯಕ್ತಿಗಳು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.

ಅರ್ಹ ಆಸಕ್ತ ಸಂಸ್ಥೆಗಳು ಅಥವಾ ವ್ಯಕ್ತಿಗಳು ಮುಚ್ಚಿದ ಲಕೋಟೆಯಲ್ಲಿ ಪ್ರಸ್ತಾವನೆಯನ್ನು ಹಾಗೂ ಅಗತ್ಯ ದಾಖಲೆಗಳನ್ನು ಮುಖ್ಯಾಧಿಕಾರಿಗಳು, ಪುರಸಭೆ ಕುಂದಾಪುರ ಕಛೇರಿಗೆ 15 ದಿನದ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಆರೋಗ್ಯ
ವಿಭಾಗವನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.