ಮಂಗಳೂರು: ವಳಚ್ಚಿಲ್ ಎಕ್ಸ್‌ಪರ್ಟ್‌ ಕಾಲೇಜಿನಲ್ಲಿ ವಿಶೇಷ ಅಡುಗೆ ಸ್ಪರ್ಧೆ

ಮಂಗಳೂರು: ವಿದ್ಯಾರ್ಥಿಗಳು ಮತ್ತು ಪೊಷಕರು ಪಾಕಶಾಲೆಯ ಕೌಶಲ್ಯಗಳನ್ನು ಒಟ್ಟಾಗಿ ಅನ್ವೇಷಿಸಲು ಮತ್ತು ಪ್ರದರ್ಶಿಸಲು ಪದವಿ ಪೂರ್ವ ಶಿಕ್ಷಣದಲ್ಲಿ ನಡೆದ ಮಾಸ್ಟರ್ ಶೆಫ್ ಸ್ವರ್ಧೆ ೨೦೧೯ ಕಾರ್ಯಕ್ರಮವು ವಳಚ್ಚಿಲ್ ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜು ಮತ್ತು ಸ್ಪೇಡ್‌ ಇಂಟಿಗ್ರೇಟೆಡ್ ಸರ್ವೀಸಸ್‌ ಘಟಕವಾದ ಸ್ಪೈಸಸ್‌ಎನ್ ಶೆಫ್‌ ಇವರ ಜಂಟಿ ಆಶ್ರಯದಲ್ಲಿ ನಡೆಯಿತು.

ಗೇಟ್ ವೇ ಹೊಟೇಲ್ (ತಾಜ್) ಕಾರ್ಯನಿರ್ವಾಹಕ ಬಾಣಸಿಗ ಶ್ರೀಯುತ ಸಿನು ವಿಜಯನ್‌ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಹಲವು ಸವಾಲು ಬರುತ್ತವೆ ಆದರೆ ಅವುಗಳನ್ನು ಮೆಟ್ಟಿನಿಂತು ಗೆಲ್ಲಬೇಕು ಎಂದು ಹೇಳಿದರು.ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ವಿದ್ಯೆಯೊಂದಿಗೆ ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡಿರುವುದು ವಿಶೇಷ ಎಂದು ಹೇಳಿದರು.

ಸಿಕೆಕೆ ಕಿಚನ್ಸ್‌ಆಫ್ ಮಹಾರಾಜ ಇದರ ಮುಖ್ಯಕಾರ್ಯನಿರ್ವಾಹಕ ಶೆಫ್  ಕೋಮಲ್ ಪ್ರಭು, ಮರಿಯಮ್ ಮೊಹಿಯುದ್ದೀನ್‌ ಅವರು ಮಾತನಾಡಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಶೆ ಡಾ.ಉಷಾಪ್ರಭಾ ಎನ್.ನಾಯಕ್‌ ಅವರು ಮಾತನಾಡಿ, ಈ ಜಗತ್ತಿನ ಎಲ್ಲ ಕಲಾತ್ಮಕ ಕೌಶಲ್ಯಗಳ ಪೈಕಿ ಅಡುಗೆ ಮೊದಲ ಮೂಲ ಮಾದರಿಯಾಗಿದೆ ಹಾಗೂ ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದೆ. ಅಡುಗೆಯ ಮೂಲಕ ವಿಜ್ಞಾನವು ಬೆಳವಣಿಗೆ ಆಗಿದೆ. ಆ ಮೂಲಕ ಅಡುಗೆಯಲ್ಲಿ ಹಲವು ಪ್ರಯೋಗಗಳು ನಡೆದಿದೆ.ಇಲ್ಲಿನ ಮನುಷ್ಯನ ಬುದ್ದಿಶಕ್ತಿ ಅತಿವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರಎಲ್.ನಾಯಕ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಕ್ಕಳು ಯಾವುದೇ ವೃತ್ತಿಕ್ಷೇತ್ರವನ್ನುಅಯ್ಕೆ ಮಾಡಿದರೂ ಅಲ್ಲಿ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸ್ಪೇಡ್‌ಇಂಟಿಗ್ರೇಟೆಡ್ ಸರ್ವೀಸಸ್ ನಿರ್ದೇಶಕರಾದ ದಿನೇಶ್ ಪಲ್ಲಿಯ್ಲಿ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ- ತಂತ್ರಜ್ಞಾನದ ನಿರ್ದೇಶಕರಾದ ಅಂಕುಶ್‌ಎನ್. ನಾಯಕ್, ದೀಪಿಕಾ ಎ.ನಾಯಕ್, ಪ್ರೇಮಲತಾ ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ ವಿಜಯನ್ ಉಪಸ್ಥಿತರಿದ್ಧರು.

ಸ್ಪೇಡ್‌ಇಂಟಿಗ್ರೇಟೆಡ್ ಸರ್ವೀಸಸ್‌ನ  ಅಶ್ವಿನ್ ಪೈಸ್‌ ಅವರು ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರಾದ ರೋಶನಿ ಉಪಸ್ನಾ ಅವರು ನಿರೂಪಿಸಿ, ಸ್ಪೇಸಸ್‌ಎನ್ ಶೆಫ್‌ನ ಕಾರ್ಯನಿರ್ವಾಹಕ  ಪ್ರೀಥಮ್‌ ಅವರು ವಂದಿಸಿದರು.

ಸ್ಪರ್ಧೆಯಲ್ಲಿಪ್ರಥಮ ಸ್ಥಾನವನ್ನುವಿದ್ಯಾರ್ಥಿಗಳಾದ ಆಕಾಂಕ್ಷಾ ರಂಜನ್, ನೇಹಾ ಅಂಗಡಿ, ಅವನಿ ಕಾಮತ್ ಮತ್ತು  ಲತಾ ಶ್ರೀಧರ್ ಹಾಗೂ ದ್ವಿತೀಯ ಸ್ಥಾನವನ್ನುವಿದ್ಯಾರ್ಥಿಗಳಾದ ಅಥುಲ್ಯಅಂಬ್ಲಿಶ್, ಎಂ.ಎಸ್.ಸ್ಪೂರ್ತಿ,ಧರಣಿ ಹಿಂಡ್ಲಟ್ಟಿ ಮತ್ತು  ಸುಜಯಾ, ತೃತಿಯ ಸ್ಥಾನವನ್ನು ವಿದ್ಯಾರ್ಥಿಗಳಾದ ಹನನ್ ಮರಿಯಮ್, ಅಂಬಿಕಾ ಅಲ್ಮಾಜೆ, ಶ್ರೇಯಾ ಸಜ್ಜನ್ ಮತ್ತು ಶ್ರೀಮತಿ ಜ್ಯೋತಿಅಲ್ಮಾಜೆ ಅವರು ಪಡೆದರು.