ಉಡುಪಿ: ಕಾಂಗ್ರೆಸ್ ನಾಯಕಿ ಜಯಶ್ರೀ ಕೃಷ್ಣರಾಜ್ (68)ಸೋಮವಾರ ದಿಲ್ಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಇಬ್ವರು ಪುತ್ರಿಯರನ್ನು ಅಗಲಿದ್ದಾರೆ.
ದೆಹಲಿಯಲ್ಲಿರುವ ಮಗಳ ಮನೆಗೆ ತಿಂಗಳ ಹಿಂದೆ ಹೋಗಿದ್ದರು. ಅಲ್ಲಿ ಹೃದಯಾಘಾತ ಸಂಭವಿಸಿದೆ. ಒಂದು ಬಾರಿ ಉಡುಪಿ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದರು.
ಇವರು ಮಲ್ಪೆ ಮಧ್ವರಾಜ್ ಅವರ ಸಹೋದರ ಕೃಷ್ಣರಾಜ ಅವರ ಪತ್ನಿ.