ಉಡುಪಿ:ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು: ಬಹುಮಾನ ವಿತರಣೆ ಮತ್ತು ಪ್ರತಿಭಾ ಕಾರ್ಯಕ್ರಮ.


ಉಡುಪಿ:”ಪ್ರತಿಭೆಯೊಂದಿಗೆ ಸೃಜನಶೀಲತೆಯು ಒಳಗೊಂಡಿರ ಬೇಕು.ಇಂದಿನ ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ಬದುಕಿನ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದರೆ ಅಂಕಗಳೊಂದೆ ಸಾಕಾಗುವುದಿಲ್ಲ ಇದರ ಜೊತೆಗೆ ವ್ಯಕ್ತಿತ್ವದ ಪರಿಪೂರ್ಣತೆಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಅಷ್ಟೇ ಮುಖ್ಯ. ಶಿಕ್ಷಣದ ಅಂತಿಮ ಗುರಿ ಆತ್ಮದ ಕಣ್ಣನ್ನು ಬೆಳಕಿನೆಡೆ ತಿರುಗಿಸುವುದೇ ನಿಜವಾದ ಶಿಕ್ಷಣ ಇಂತಹ ಪರಿಪೂರ್ಣ ಶಿಕ್ಷಣ ನೀಡುವಲ್ಲಿ ಶ್ರೀ ಪೂಣ೯ ಪ್ರಜ್ಞಾ ಕಾಲೇಜು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ” ಎಂದು ಎಂಜಿಎಂ.ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.

ಅವರು ಉಡುಪಿ ಶ್ರೀ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಸಾಂಸ್ಕೃತಿಕ ಪ್ರತಿಭಾ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಡಾ.ಪಿ.ಎಸ್.ಐತಾಳ್ ಗೌರವ ಕಾರ್ಯದರ್ಶಿ ಪೂಣ೯ಪ್ರಜ್ಞಾ ಪ.ಪೂ.ಕಾಲೇಜು ಮ್ಯಾನೇಜಿಂಗ್ ಕಮಿಟಿ ಉಡುಪಿ.ಇವರು ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಸಂತೇೂಷ ಕುಮಾರ್ ; ಹಿರಿಯ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿ ವೈಷ್ಣವಿ ಸ್ವಾಗತಿಸಿದರು.ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆ ದೀಪ್ತಿ ವರದಿ ಮಂಡಿಸಿದರು.ಕಾರ್ಯದರ್ಶಿ ಡಿಯೇೂನ್ ಹಾಡ್ರೀಲ್ ವಂದಿಸಿದರು. ವಿದ್ಯಾರ್ಥಿನಿ ಶೀಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.