ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಅಗಲಿ ಆರು ವರ್ಷಗಳು ಕಳೆದಿವೆ. ಮಂಗಳವಾರ ಅವರ ಆರಾಧನಾ ಮಹೋತ್ಸವ ನಡೆಯಿತು. ಮೂರು ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಆರಾಧನಾ ಮಹೋತ್ಸವ ಏರ್ಪಾಟ್ ಆಗಿದೆ. ದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ ಶ್ರೀಗಳ ಆರಾಧನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಇದೆ ವೇಳೆ ಉಡುಪಿಯ ಮಠದಲ್ಲೂ ಆರಾಧನಾ ಮಹೋತ್ಸವ ನಡೆಸಲಾಯಿತು. ವಿವಿಧ ಗಣ್ಯರು ವಿದ್ವಾಂಸರು ಮದ್ಯಾರಾಧನೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಭಕ್ತರಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

















