ಉಡುಪಿಯ ಪ್ರಖ್ಯಾತ ಸಾರಿಗೆ ಸಂಸ್ಥೆಯಾಗಿದ್ದ ಮಂಜುನಾಥ್ ಮೋಟರ್ಸ್ ನ ವ್ಯವಸ್ಥಾಪಕ ಕೆ. ನಾರಾಯಣ ಶೆಟ್ಟಿ ಬ್ರಹ್ಮಗಿರಿಯ ಸ್ವಗೃಹದಲ್ಲಿ ದಿ:24.12.2025 ರಾತ್ರಿ 12.15ಕ್ಕೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಇವರು ಬಂಟ್ ಸಂಘದ ಪ್ರಥಮ ಅಧ್ಯಕ್ಷರಾಗಿ ಹಾಗೂ ಲಯನ್ಸ್ ಕ್ಲಬ್ ಉಡುಪಿ, ಸೀನಿಯರ್ ಸಿಟಿಜನ್ಸ್ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇವರ ಅಂತ್ಯ ಸಂಸ್ಕಾರ ಉಡುಪಿಯಲ್ಲಿ ಇಂದು ಜರುಗಲಿದೆ. ಇವರು ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

















