ಬೆಂಗಳೂರು:ರಾಜಾಜಿನಗರದಲ್ಲಿ ಡಿಸೆಂಬರ್ 19 ರಿಂದ 21 ರವರೆಗೆ ಸೇವಾಸಂಕಲ್ಪ ಕಾರ್ಯಕ್ರಮ

ಬೆಂಗಳೂರು:ರಾಜಾಜಿನಗರದಲ್ಲಿ ಡಿಸೆಂಬರ್ 19,20,21ರಂದು ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದು ಅಭಯಸೇವಾ ಫೌಂಡೇಶನ್ ಅಧ್ಯಕ್ಷ ಯು ಬಿ ಉಮೇಶ್ ಶೆಟ್ಟಿ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ನಡೆಸಿ ಮಾತನಾಡಿದ ಅವರು, ಬಡವರ, ನೊಂದವರ ಸೇವೆ ಮಾಡಲು ಮತ್ತು ಸಂಸ್ಕೃತಿ ಉಳಿಸಲು ಸ್ಥಾಪನೆಯಾಗಿದೆ. ಕಳೆದ ವರ್ಷ ಸೇವಾ ಸಂಕಲ್ಪ ಕಾರ್ಯಕ್ರಮ ಸಾವಿರಾರು ಜನರಿಗೆ ಉಪಯೋಗವಾಗಿದೆ.ಈ ಭಾರಿ ರಾಜಾಜಿಗರದ ಶ್ರೀರಾಮಮಂದಿರ ಆಟದ ಮೈದಾನ ರಾಜಾಜಿನಗರದಲ್ಲಿ ಡಿಸೆಂಬರ್ 19,20,21ರ ಮೂರು ದಿನಗಳ ಕಾಲ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಲ್ಲಿ ಅಂಧಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ.ಮಾದಕವಸ್ತುಗಳ ಪಿಡುಗು, ಬಾಲ್ಯ ವಿವಾಹ, ಸಂಚಾರಿ ನಿಯಮ ಪಾಲನೆಗೆ ಬೀದಿ ನಾಟಕದ ಮೂಲಕ ರಾಜಾಜಿನಗರದ ಬೇರೆ ಬೇರೆ ಕಡೆ ಜಾಗೃತಿ ಅಭಿಯಾನ ಏರ್ಪಡಿಸಲಾಗಿದೆ ಎಂದಿದ್ದಾರೆ.ಹಾಗೇ ನವ ದುರ್ಗಾದೀಪ ನಮಸ್ಕಾರ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ.

108 ಕಳಸಪೂಜೆ, ಹೋಮ, ಹವನ ನವದುರ್ಗೆಯ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಯಲಿದೆ. ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಬಡವರ ಆರೋಗ್ಯ ತಪಾಸಣೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗುತ್ತಿದೆ.ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಹಾಗೂ ಕಣ್ಣಿನ ದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತದೆ.

ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭರತನಾಟ್ಯ, ಹುಲಿವೇಷ, ಭಜನೆ ,ಯಕ್ಷಗಾನ, ನಂದಗೋಕುಲ ತಂಡದ ನವಶಕ್ತಿ ವೈಭವ ನೃತ್ಯ, ಸವಿತಕ್ಕನ ಹಳ್ಳಿ ಬ್ಯಾಂಡ್ ,ಬೀಟ್ ಗುರೂಸ್ ಮ್ಯೂಸಿಕ್, ಪಂಚಿನ ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಅಭಯ ಸೇವಾ ಫೌಂಡೇಷನ್ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡಿ,ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಉಮೇಶ್ ಶೆಟ್ಟಿಯವರು ಮನವಿ ಮಾಡಿಕೊಂಡಿದ್ದಾರೆ.