ರಾಜೇಂದ್ರ ಭಟ್ ಕೆ ಅವರಿಗೆ ಜಯಂಟ್ಸ್ ಫೆಡರೇಶನ್ ರಾಜ್ಯ ಪ್ರಶಸ್ತಿ.

ಕಾರ್ಕಳ: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ ವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ಭಟ್ ಕೆ ಅವರಿಗೆ ಈ ವರ್ಷದ ರಾಜ್ಯಮಟ್ಟದ ಜಯಂಟ್ಸ್ ಫೆಡರೇಶನ್ ಅವಾರ್ಡ್ ದೊರೆತಿದೆ. ಅವರ ಶಿಕ್ಷಣರಂಗದ ಸೇವೆಯನ್ನು ಗುರುತಿಸಿ ಜಯಂಟ್ಸ್ ಫೆಡರೇಶನ್ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಉಡುಪಿಯಲ್ಲಿ ನಡೆದ ಜಯಂಟ್ಸ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.

ಅವರು ಕಳೆದ 37 ವರ್ಷಗಳಿಂದ ಇನ್ನಾ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿದ್ದು ಕಳೆದ 3 ವರ್ಷಗಳಿಂದ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಜೊತೆಗೆ ಅವರು ಜೆಸಿಐ ಸಂಸ್ಥೆಯ ರಾಷ್ಟ್ರಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರು ಕೂಡ ಆಗಿ ಜನಪ್ರಿಯರಾಗಿದ್ದಾರೆ.