ಎಕೆಎಂಎಸ್ ಬಸ್‌ ಮಾಲೀಕ ಸೈಫುದ್ದೀನ್‌ ಕೊಲೆ ಪ್ರಕರಣ: ಐದನೇ ಆರೋಪಿ ಬಂಧನ

ಉಡುಪಿ: ಎಕೆಎಂಎಸ್ ಬಸ್‌ ಮಾಲೀಕ ಸೈಫುದ್ದೀನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಮಿಶನ್ ಕಂಪೌಂಡ್ ಬಳಿಯ ಶಾಂತಿ ನಗರದ ನಿವಾಸಿ ಮಾಲಿ ಮೊಹಮ್ಮದ್‌ ಸಿಯಾನ್‌(31) ಬಂಧಿತ ಆರೋಪಿ. ಈತನನ್ನು ಸೋಮವಾರ ಬೆಳಿಗ್ಗೆ 10.30ಕ್ಕೆ ಎಂಜಿಎಂ ಕಾಲೇಜಿನ ಬಸ್‌ ಸ್ಟ್ಯಾಂಡ್‌ ಬಳಿಯಲ್ಲಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ KA20MF207ನೇ ಗ್ಲಾಂಜಾ ಕಾರನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್‌ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.