ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.)ಉಡುಪಿ:ನಾಳೆ (ಡಿ.14) ನೂತನ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಇದರ ಉದ್ಘಾಟನಾ ಸಮಾರಂಭ

ಉಡುಪಿ:ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.)ಉಡುಪಿಯಲ್ಲಿ ನಾಳೆ (ಡಿ.14) ನೂತನ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಇದರ ಉದ್ಘಾಟನಾ ಸಮಾರಂಭವು ಸಮಯ ಬೆಳಿಗ್ಗೆ 10 ಗಂಟೆಯಿಂದ ಟೀಚರ್ ಟ್ರೈನಿಂಗ್ ಸ್ಕೂಲ್ ಬಳಿ ಅಜ್ಜರಕಾಡು ಉಡುಪಿ ಇಲ್ಲಿ ನಡೆಯಲಿರುವುದು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕನ್ನಡ, ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಮತ್ತು ಬಳಗದವರಿಂದ “ರಾಗ್ ರಂಗ್” ಸಂಗೀತ ರಸ ಮಂಜರಿ ಕಾರ್ಯಕ್ರಮವು ನಾಳೆ ಬೆಳಿಗ್ಗೆ 9:30 ಕ್ಕೆ ನಡೆಯಲಿದೆ.

ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಶ್ರೀ ಅದಮಾರು ಮಠ ಉಡುಪಿ ಇವರು ನೆರವೇರಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ದಿವ್ಯ ಉಪಸ್ಥಿತಿಯಲ್ಲಿ ವಂದನೀಯ ರೆ| ಫಾ|ಲಿಯೋ ಪ್ರಕಾಶ್ ಡಿಸೋಜ ಸಹಾಯಕ ಧರ್ಮ ಗುರುಗಳು, ಮದರ್ ಆಫ್ ಸಾರೋಸ್ ಚರ್ಚ್, ಇವರು ಇರಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಮಿತ್ರ ಆರ್. ಅಧ್ಯಕ್ಷರು ನೂತನ್ ಕ್ರೆಡಿಟ್ ಕೋ ಆಪರೇಟರ್ ಸೊಸೈಟಿ ಇವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಯ‌ಶ್‌ಪಾಲ್ ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಇವರು ಮಾಡಲಿದ್ದಾರೆ.ನೂತನಾಮೃತ ನಿಧಿ ಚಾಲನೆಯನ್ನು ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರಕಾರ, ಮಾಡಲಿದ್ದಾರೆ.

ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್, ಪ್ರಸಾದ್‌ರಾಜ್ ಕಾಂಚನ್, ಎಂ. ಡಿ. ಕಾಂಚನ್ ಹುಂಡೈ ಪ್ರೈ.ಲಿ.,ಶ್ರೀಮತಿ ಲಾವಣ್ಯ ಕೆ. ಆ‌ರ್., ಸಹಕಾರ ಸಂಘಗಳ ಉಪ ನಿರ್ದೇಶಕರು ಉಡುಪಿ, ಜೆ. ಸುಧೀರ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಕುಂದಾಪುರ ಇವರು ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿರಲಿದ್ದಾರೆ.

ಸರ್ವ ಸಹಕಾರಿ ಬಂಧುಗಳನ್ನು ಕಾರ್ಯಕ್ರಮಕ್ಕೆ ಹೃತ್ತೂರ್ವಕವಾಗಿ ಸ್ವಾಗತಿಸುವ:

ಶ್ರೀ ಬ್ಯಾಪ್ಟಿಸ್ ಡಯಾಸ್- ಉಪಾಧ್ಯಕ್ಷರು

ಶ್ರೀ ಗಣೇಶ್ ಶೇರಿಗಾರ್ – ಪ್ರಧಾನ ವ್ಯವಸ್ಥಾಪಕರು

ಶ್ರೀ ಅಶ್ವಿನ್ ಕೆ. ವಿ. -ಶಾಲಾ ವ್ಯವಸ್ಥಾಪಕರು

ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ದೈನಿಕ ಠೇವಣಿ ಸಂಗ್ರಾಹಕರು.