ಮಂಗಳೂರು: ಬಹುಭಾಷಾ ನಟಅರ್ಜುನ್ ಸರ್ಜಾ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದರು.
ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೇತ್ರದ ವಾಸ್ತುಶಿಲ್ಪ ಕೆತ್ತನೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಜಾ ಅವರು ಚೆನ್ನೈಯ ಗೇರುಗಂಬಾಕನಲ್ಲಿ ಬೃಹತ್ ಹನುಮಾನ್ದೇವಸ್ಥಾನವೊಂದನ್ನು
ನಿರ್ಮಿಸುತ್ತಿದ್ದಾರೆ. ಅದಕ್ಕಾಗಿ ಮಂಗಳೂರಿನ ವಾಸ್ತುಶಿಲ್ಪಿ ಜೊತೆ ಪೊಳಲಿ ಕ್ಷೇತ್ರದ ವಾಸ್ತು ಶಿಲ್ಪ ಮತ್ತು ಮರದ ಕೆತ್ತನೆಯನ್ನು ವೀಕ್ಷಿಸುವುದಕ್ಕಾಗಿ ಆಗಮಿಸಿದ್ದರು. ವಾಸ್ತುಶಿಲ್ಪ ಕೆತ್ತನೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.