ಉಡುಪಿ: ಪ್ರಜಾಪ್ರಭುತ್ವದ ಯಶಸ್ವಿವಿನ ಬೇರು ನಿಂತಿರುವುದೇ ಸ್ಥಳೀಯ ಆಡಳಿತ ಮೇಲೆ.ಸ್ಥಳೀಯ ಆಡಳಿತ ಯಶಸ್ವಿಯಾಗ ಬೇಕಾದರೆ ಎಲ್ಲಾ ವಗ೯ದ ಜನರ ಸಹಭಾಗಿತ್ವ ಸಹಕಾರ ಅತೀ ಅಗತ್ಯ.ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗಾಗಿಯೇ ಹಕ್ಕುಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಸುವುದು ಅತ್ಯಂತ ಔಚಿತ್ಯ ಪೂರ್ಣವಾದ ಮಾದರಿ ಕಾರ್ಯಕ್ರಮವೆಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.
17ನೇ ಚೇರ್ಕಾಡಿ ಗ್ರಾಮಪಂಚಾಯತ್ ವತಿಯಿಂದ ಶ್ರೀ ಶಾರದಾ ಹೈಸ್ಕೂಲಿನ ಪರಿಸರದಲ್ಲಿ ನಡೆದ ಮಕ್ಕಳ ಹಕ್ಕುಗಳ ವಿಶೇಷ ಅಧಿವೇಶನದಲ್ಲಿ ಸಂಪನ್ಮೂಲ ಉಪನ್ಯಾಸವಿತ್ತು ಮಾತನಾಡಿದರು.
ಸಮಾರಂಭದಲ್ಲಿ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ನಾಯ್ಕ;ಉಪಾಧ್ಯಕ್ಷೆ ಪ್ರತಿಮಾ ಸುರೇಶ್ ;ಪೂಣಿ೯ಮಾ ಎಂ.ಎಸ್; ಅಂಗನವಾಡಿ ಮೇಲ್ವಿಚಾರಕಿ ಶಿಶು ಅಭಿವೃದ್ಧಿ ಯೇೂಜನಾಧಿಕಾರಿ ಕಛೇರಿ ಬ್ರಹ್ಮಾವರ;ಶ್ರೀನಾಥ್ ಮಾಗ೯ದಶಿ೯ ಅಧಿಕಾರಿಗಳು;ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ:ಕಾರ್ಯದರ್ಶಿ ಉದಯ ಶೆಟ್ಟಿ ; ಶ್ರೀ ಶಾರದಾ ಹೈಸ್ಕೂಲು ಮುಖ್ಯಸ್ಥ ಮಂಜುನಾಥ್ ನಾಯ್ಕ ; ಗ್ರಾಮ ಪಂಚಾಯತ್ ಸದಸ್ಯರು; ಪೊಲೀಸ್ ಅಧಿಕಾರಿಗಳು;ವಿವಿಧ ಇಲಾಖೆಯ ಅಧಿಕಾರಿಗಳು ; ವಿದ್ಯಾರ್ಥಿಗಳ ಪೇೂಷಕರು; ಶಿಕ್ಷಕರು ಭಾಗವಹಿಸಿದ್ದರು.
ಪಂಚಾಯತ್ ಹಿರಿಯ ಸದಸ್ಯ ಚೇಕಾ೯ಡಿ ಹರೀಶ್ ಶೆಟ್ಟಿ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿಗಳೆ ಸಂಪೂರ್ಣವಾಗಿ ಕಾರ್ಯಕ್ರಮ ನಡೆಸಿಕೊಟ್ಟರು.ಅನಂತರದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉಪಸ್ಥಿತರಿದ್ದ ಅಧಿಕಾರಿಗಳು ಉತ್ತರ ನೀಡಿದರು. ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿಗಳಿಗಾಗಿ ನಡೆದ ಗ್ರಾಮ ಸಭೆ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿಬಂತು.

















