ಉಡುಪಿ: ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ಸ್ಮರಣಿಕಾ ಸಂಸ್ಥೆ ಸಜ್ಜಾಗಿದೆ. ಮೊಮೆಂಟೊ ಮತ್ತು ಗಿಫ್ಟ್ ಗೆ ಹೆಸರಾದ ಸ್ಮರಣಿಕಾ ಸಂಸ್ಥೆಯು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿದೆ. ಅಂದ ಹಾಗೇ ಈ ಸಲ ಸ್ಮರಣಿಕಾ ಮೊಮೆಂಟೊ ಗಿಫ್ಟ್ ಮಳಿಗೆಯ ಪ್ರಥಮ ವಾರ್ಷಿಕೋತ್ಸದ ಸಂಭ್ರಮ ಮತ್ತು ದೀಪಾವಳಿಯ ಪ್ರಯುಕ್ತ ಈ ಹೆಮ್ಮೆಯ ಸಂಸ್ಥೆ ವಿಶೇಷ ಕೊಡುಗೆಯ ಮಾರಾಟ ಆಯೋಜಿಸಿದೆ.
ರೂ 1,000 ಖರೀದಿಗೆ ಕಾದಿದೆ ಭರ್ಜರಿ ಬಹುಮಾನ:
ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಕಲ್ಸಂಕ ವೃತ್ತ ಬಳಿಯ ಸ್ಮರಣಿಕಾ ರೋಯಲೆಯಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ಪ್ರತಿ 1000 ರೂ. ಖರೀದಿಗೆ ಆಕರ್ಷಕ ಬಂಪರ್ ಬಹುಮಾನಗಳಿರುವ ಕೂಪನ್ ಸಿಗಲಿದೆ
ಕಾರು, ದ್ವಿಚಕ್ರ ವಾಹನ, ಫ್ರಿಡ್ಜ್, ಎಲ್ಇಡಿ ಸಹಿ ಇತರೆ ಭರ್ಜರಿ ಬಹುಮಾನಗಳನ್ನು ಗೆಲ್ಲಲು ಇದೊಂದು ಬಿಂದಾಸ್ ವೇದಿಕೆ. ಸಂಸ್ಥೆಯಲ್ಲಿ ಎಲ್ಲ ಧರ್ಮಗಳ ಇತರೆ ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಹ್ಯಾಂಡಿಕ್ರಾಫ್ಟ್, ಸ್ಪೋರ್ಟ್ಸ್, ಡೈರಿ, ಗಡಿಯಾರ, ಪೆನ್, ಪರ್ಸ್, ಕೀ ಚೈನ್ ಮೊದಲಾದ ವಸ್ತುಗಳು ಸಂಗ್ರಹವಿದೆ.ಸಂಸ್ಥೆಯ ಮಳಿಗೆಗಳಲ್ಲಿ ದೀಪಾವಳಿ ವಿಶೇಷವಾಗಿ ಪ್ರಾದೇಶಿಕ ಪಾರಂಪರಿಕ ಶೈಲಿಯ ಪರಿಸರಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹವಿದೆ.ವಾರ್ಷಿಕೋತ್ಸವದ ಪ್ರಯುಕ್ತ ಪುರುಷರ ಶರ್ಟ್ ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ
ಸ್ಮರಣಿಕಾ ಬಾಂಬೆ ಸ್ವೀಟ್ಸ್ ನಲ್ಲಿ ಬಾಯಿ ನೀರೂರಿಸುವ ಖಾದ್ಯಗಳು:
ಸ್ಮರಣಿಕಾ ಬಾಂಬೆ ಸ್ವೀಟ್ಸ್ ನಲ್ಲಿ ಗ್ರಾಹಕರ ಬಾಯಿ ನೀರೂರಿಸುವ ಖಾದ್ಯಗಳು ಈ ದೀಪಾವಳಿಗೆ ರೆಡಿಯಾಗುತ್ತಿದೆ. ಗ್ರಾಹಕರ ಹಲವು ದಿನಗಳ ಬೇಡಿಕೆ ಪೂರೈಸುವ ಸಲುವಾಗಿ ರುಚಿಕರ ಬಾಂಬೆ ಸ್ವೀಟ್ಸ್ ಕೊಡಲಾಗುವುದು.
ಏನಿದೆ ಸ್ಪೆಷಲ್:
ಡ್ರೈಫ್ರೂಟ್ಸ್, ಶುಗರ್ ಫ್ರೇ ಸ್ವೀಟ್ಸ್ ಗಳು, ರಾಜ್ ಕಚೋರಿ, ಸಮೋಸ, ಪಾನಿಪುರಿ, ವಡಾಪಾವ್, ಮಸಾಲಾಪುರಿ ಸೇರಿದಂತೆ ಇತರೆ ಚಾಟ್ಸ್ ಗಳ ರುಚಿ ಗ್ರಾಹಕರನ್ನು ತಂಪು ಮಾಡಲಿದೆ, ಮಿತದರದಲ್ಲಿ ದೊರಕಲಿದೆ. ಬಲ್ಕ್ ಬುಕಿಂಗ್ ಮಾಡಿದಲ್ಲಿ ಶೇ.10 ರಿಯಾಯಿತಿ, ಗ್ರಾಹಕರ ಅನುಕೂಲ ಮತ್ತು ಬೇಡಿಕೆಯನುಸಾರ ಬುಕಿಂಗ್ ಅನ್ನು ಅ. 25 ರವರೆಗೆ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಮಾಲಕ ದಿವಾಕರ್ ಸನಿಲ್ ತಿಳಿಸಿದ್ದಾರೆ.