ಹೆಬ್ರಿ: ಹಾವಂಜೆ ಗ್ರಾಮದ ತ್ರಿವರ್ಣ ವಿಶ್ವವೇದಿಕೆ (ರಿ.), ಕೀಳಂಜೆ ಇದರ 12ನೇ ವಾರ್ಷಿಕೋತ್ಸವ ಸಮಾರಂಭ ಡಿ. 3ರಂದು ಸಂಜೆ 4ಗಂಟೆಯಿಂದ ಕೀಳಂಜೆ ಶ್ರೀ ನಂದಿಕೇಶ್ವರ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ. ಇದೆ ಸಂದರ್ಭದಲ್ಲಿ ನಂದಿಕೇಶ್ವರ ದೈವಸ್ಥಾನದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಹಾಗೂ ದಾನಿಗಳಿಗೆ ಸಮ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಾಣಾಕ್ಯ ಮೇಲೋಡಿಸ್ ಹೆಬ್ರಿ ಇವರಿಂದ ಸಂಗೀತಾ ರಸಮಂಜರಿ, ಸುಪ್ರಸಿದ್ಧ ನಾಟಕ ತಂಡವಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಶಶಿರಾಜ್ ರಾವ್ ಕಾವೂರು ಅವರ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತ್ರಿವರ್ಣ ವಿಶ್ವವೇದಿಕೆ (ರಿ.),ಇದರ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ ತಿಳಿಸಿದ್ದಾರೆ.


















