ಡಿ. 6- 7ರಂದು ಉಡುಪಿಯಲ್ಲಿ “ಕರಾವಳಿ ಭಜನಾ ಸಮಾವೇಶ”

ಉಡುಪಿ: ಸಂತಕವಿ ಕನಕದಾಸ ಮತ್ತು‌ ತತ್ವಪದಕಾರರ ಅಧ್ಯಯನ ಕೇಂದ್ರ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ ಮತ್ತು ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಇದರ ಸಹಯೋಗದಲ್ಲಿ ‘ಕರಾವಳಿ ಭಜನಾ ಸಮಾವೇಶ’ ಎಂಬ ಎರಡು ದಿನಗಳ ಸಮಾವೇಶವನ್ನು ಡಿ. 6 ಮತ್ತು 7ರಂದು ಉಡುಪಿ ಎಂಜಿಎಂ ಕಾಲೇಜು ಆವರಣದ ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂತಕವಿ ಕನಕದಾಸ ಮತ್ತು‌ ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ತಿಳಿಸಿದರು.

ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ನೀಡಿದ ಅವರು, ಡಿ.6ರಂದು ಬೆಳಿಗ್ಗೆ 10ಗಂಟೆಗೆ ಹಿರಿಯ ವಿದ್ವಾಂಸ ಡಾ. ಬಿ. ಎ ವಿವೇಕ ರೈ ಸಮಾವೇಶವನ್ನು‌ ಉದ್ಘಾಟಿಸಲಿದ್ದಾರೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಮಹಾಲಕ್ಷ್ಮೀ ಮೊಗವೀರ ಭಜನಾ ಮಂಡಳಿ, ರಾಗ ರಂಜಿನಿ ತಂಡ, ಶ್ರೀ ಮಹಾಗಣಪತಿ ಭಜನಾ ಮಂಡಳಿ, ಜಿ.ಎಸ್.ಬಿ ಮಹಿಳಾ ಮಂಡಳಿ, ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿ, ರಂಗಚಿನ್ನಾರಿಯ ಸ್ಮರಚಿನ್ನಾರಿ ಭಜನಾ ಮಂಡಳಿ, ಸರ್ವೇಶ್ವರೀ ಭಜನಾ ಮಂಡಳಿ, ಬಾಲವಿಕಾಸ ಭಜನಾ ಮಂಡಳಿ, ಶ್ರೀ ವೀರಭದ್ರ ಗುರು ಮಾಚಿದೇವ ಭಜನಾ ಮಂಡಳಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ತಂಡ ಸೇರಿ ಒಟ್ಟು 13 ಭಜನಾ ತಂಡಗಳು ಭಜನೆಗಳನ್ನು ಹಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿ ಡಾ. ಜಗದೀಶ್ ಶೆಟ್ಟಿ, ಭಜನಾ ಸಮಾವೇಶದ ಸಂಯೋಜಕ ರವಿರಾಜ್ ಎಚ್‌.ಪಿ., ಸಹ ಸಂಶೋಧಕ ಅರುಣ್ ಕುಮಾರ್ ಉಪಸ್ಥಿತರಿದ್ದರು.