ಪ್ರಧಾನಿ ಭೇಟಿ ಸಮಯದಲ್ಲಿ ಬದಲಾವಣೆ: 40 ನಿಮಿಷ ಮುಂಚಿತವಾಗಿ ಆಗಮಿಸಲಿರುವ ಮೋದಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ.

ನರೇಂದ್ರ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11.25ಕ್ಕೆ ಬಂದು ಇಳಿದು, 12ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಿಗ್ಗೆ 11 ಗಂಟೆಗೆ ಆದಿಉಡುಪಿಗೆ ಆಗಮಿಸಿ 11 ಗಂಟೆಯಿಂದ 11.20ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಠದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1ಗಂಟೆಗೆ ಹೊರಡಲಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.