ಮಂಗಳೂರು: ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಉನ್ನತ ಪ್ರಾಥಮಿಕ ಶಾಲಾ ಕೊಠಡಿಯ ಬೀಗ ಮುರಿದು ಕಳ್ಳತನ ಯತ್ನ ನಡೆದಿರುವುದು ಬುಧವಾರ ಬೆಳಕಿಗೆ ಬಂದಿದೆ.
ಕೆಲವು ವಾರಗಳ ಹಿಂದೆ ಈ ಶಾಲಾ ಶಿಕ್ಷಕರ ಕೊಠಡಿಯ ಬೀಗ ಮುರಿದಿದ್ದ ಕಳ್ಳರು ಕಂಪ್ಯೂಟರ್ ಸಂಬಂಧಪಟ್ಟ ವಸ್ತುಗಳನ್ನು ದೋಚಿದ್ದರು. ಬುಧವಾರ ಶಾಲೆ ತೆರಿಯುತ್ತಿದ್ದಂತೆ ಶಾಲಾ ನಲಿಕಲಿ ಕೊಠಡಿಯ ಬೀಗ ಮುರಿದಿರುವುದು ಬೆಳಕಿಗೆ ಬಂದಿದ್ದು, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಕುಸುಮಾಧರ ಕೆ. ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಾಧವ ಭಟ್ ಸ್ಥಳದಲ್ಲಿದ್ದರು.