ಪ್ರಧಾನಿ ಉಡುಪಿ ಭೇಟಿ ಹಿನ್ನೆಲೆ: ಪೊಲೀಸರಿಂದ ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಶುರುವಾಗಿದೆ.ಪ್ರಧಾನಿ ಮೋದಿಯ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸರು ಮಾಕ್ ಡ್ರಿಲ್ ಮಾಡಿದ್ದಾರೆ.

ದೆಹಲಿ ಸ್ಪೋಟದ ನಂತರ ಪ್ರಧಾನಿ ಮೋದಿಯ ಭದ್ರತಾ ವಿಧಾನವನ್ನು ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಉಡುಪಿ ಪ್ರವಾಸದ ಮಾಕ್ ಡ್ರಿಲ್ ನಡೆಯುತ್ತಿದೆ. ಹೆಲಿಪ್ಯಾಡ್, ರೋಡ್ ಶೋ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ನಡೆಯುತ್ತಿದೆ.

ಮೋದಿ ಸಾಗುವ ರೂಟ್ ನಲ್ಲಿ ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಗಳನ್ನು ಎಸ್ಪಿಜಿ ಸೂಚಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರು ಜಮಾಯಿಸುವ ಪ್ರಮುಖ ಜಂಕ್ಷನ್ ನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.