ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (MAHE), ಮಣಿಪಾಲದ 33ನೇ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀಮತಿ ಸುರಕ್ಷಾ ಸುವರ್ಣ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಅವರು ಮಣಿಪಾಲ ವಾಣಿಜ್ಯ ಮತ್ತು ಆರ್ಥಶಾಸ್ತ್ರ ಶಾಲೆಯ ಸಹ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ “ಸ್ತ್ರೀ ಸಬಲೀಕರಣ, ಗ್ರಹಿತ ಸಾಮಾಜಿಕ ಬೆಂಬಲ ಮತ್ತು ಗ್ರಹಿತ ಆರೋಗ್ಯವು ಜೀವನತೃಪ್ತಿಯ ಪೂರ್ವ ಸೂಚಕಗಳಾಗಿ: ಸ್ವಯಂ ಸಹಾಯ ಗುಂಪುಗಳ ಅಂಶಾಧಾರಿತ ಅಧ್ಯಯನ” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಶ್ರೀಮತಿ ಸುರಕ್ಷಾ ಸುವರ್ಣ ಅವರು ಡಾ. ನವೀನ್ ಕುಮಾರ್ ಕೂಡಮರ ಅವರ ಪತ್ನಿಯಾಗಿದ್ದು, ಶ್ರೀ ಸುಧಾಕರ ಸುವರ್ಣ ಮತ್ತು ಶ್ರೀಮತಿ ಪುಷ್ಪ ಗುಂಡಿಬೈಲ್ ಅವರ ಪುತ್ರಿ.


















