ನ. 30ರಂದು ಭಕ್ತ ನೃತ್ಯ ಸೌರಭ” ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ

ಉಡುಪಿ: ಹೆಜ್ಜೆ-ಗೆಜ್ಜೆ ಫೌಂಡೇಶನ್ ಉಡುಪಿ- ಮಣಿಪಾಲ ಇದರ ವತಿಯಿಂದ “ಭಕ್ತ ನೃತ್ಯ ಸೌರಭ” ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ ನ. 30ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಹೆಜ್ಜೆ-ಗೆಜ್ಜೆ ಫೌಂಡೇಶನ್ ನ ದೀಕ್ಷಾ ರಾಮಕೃಷ್ಣನ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಫಲಕದೊಂದಿಗೆ ರೂ. 10,000 ನಗದು, ಎರಡನೇ ಬಹುಮಾನ ಪಡೆದವರಿಗೆ ರೂ.7,000 ಹಾಗೂ ಮೂರನೇ ಬಹುಮಾನ ಪಡೆದವರಿಗೆ ರೂ. 5000 ನೀಡಲಾಗುವುದು. ಅಲ್ಲದೆ, ಪ್ರಥಮ ಬಹುಮಾನ ಪಡೆದವರಿಗೆ ನೃತ್ಯದಾಸರತ್ನ ಬಿರುದು ನೀಡಲಾಗುವುದು ಎಂದರು.

ಪ್ರತಿಯೊಬ್ಬ ಸ್ಪರ್ಧಿಗೆ 10 ನಿಮಿಷಗಳ ಕಲಾವಕಾಶವಿದ್ದು ಅವರಲ್ಲಿ ಒಂದು ಅಲರಿಪು ಅಥವಾ ಜತಿಸ್ಪರ ಮತ್ತು ಇನ್ನೊಂದು ದಾಸರ ಅಂಕಿತ ಇರುವ ದೇವರನಾಮ (ಅಭಿನಯ) ನರ್ತಿಸಲು ಅವಕಾಶವಿದೆ ಎಂದು ತಿಳಿಸಿದರು.

ಡಿಸೆಂಬರ್ 7ರಂದು ಉಡುಪಿ ಹೆಜ್ಜೆ ಗೆಜ್ಜೆಯಲ್ಲಿ ” ಭಕ್ತಿ ಗಾನ ಲಹರಿ” ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಪ್ರತಿಯೊಬ್ಬರಿಗೆ 10 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಫಲಕದೊಂದಿಗೆ ರೂ 10000 ನಗದು ಬಹುಮಾನ, ಎರಡನೇ ಬಹುಮಾನ ಪಡೆದವರಿಗೆ ರೂ. 7,000 ಹಾಗೂ ಮೂರನೇ ಬಹುಮಾನ ಪಡೆದವರಿಗೆ ರೂ.5000 ನಗದು ನೀಡಲಾಗುವುದು. ಪ್ರಥಮ ಬಹುಮಾನ ಪಡೆದವರಿಗೆ ‘ದಾಸಗಾನರತ್ನ ಪ್ರಶಸ್ತಿ ನೀಡಲಾಗುವುದು ಎಂದರು.