ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ವಾರ್ಷಿಕೋತ್ಸವನ್ನು 18 ನವೆಂಬರ್ 2025 ರಂದು ಆಚರಿಸಲಾಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಕಾಶ ಶೆಟ್ಟಿ, ಪ್ರಾಂಶುಪಾಲರು, ಸರಕಾರಿ ಪಿಯು ಕಾಲೇಜು (ಕೆಪಿಎಸ್) ಕೋಟೇಶ್ವರ,ಅವರು ತಮ್ಮ ಭಾಷಣದಲ್ಲಿ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಒತ್ತಿ ಹೇಳಿದರು.
ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರ ಸೀಮಿತವಾಗದೇ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ ಎಂ ಜೆ ವಿದ್ಯಾ ಸಂಸ್ಥೆ ಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ರವರು ಕಾಲೇಜಿನ ಸಾಧನೆ ಮತ್ತು ಪ್ರಗತಿಯನ್ನು ಹೊಗಳಿದರಲ್ಲದೇ ಕಾರ್ಯಕ್ರಮಕ್ಕೆ, ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ.ಎಸ್ ಮತ್ತು. ಎಸ್ ಎನ್ ಎ ಸಂಯೋಜಕ ಪ್ರೊ.ಚಂದ್ರಶೇಖರ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ವಿಶಿಷ್ಟ ದರ್ಜೆ ಯಲ್ಲಿ ಉತ್ತೀರ್ಣರಾದ
ವಿದ್ಯಾರ್ಥಿಗಳು ಮತ್ತು ವಿಶಿಷ್ಟ ಸಾಧಕರುಗೌರವಿಸಲ್ಪಟ್ಟರು.ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ನಡೆದ ತಂಡ ಆಧಾರಿತ ವೆರೈಟಿ ಶೋ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ನೃತ್ಯ, ಸಂಗೀತ, ನಾಟಕ ಮತ್ತು ವಿವಿಧ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.

ಸಂಜೆ ನಡೆದ ಸಮಾಪನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಪ್ರೀತಾ ಪುರಾಣಿಕ್, ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್, ಕುಂದಾಪುರ, ಕಾಲೇಜಿನ ಆಡಳಿತಾಧಿಕಾರಿ ಪಾರ್ಥಸಾರಥಿ , ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಮುಂತಾದವರು ವೇದಿಕೆಯಲ್ಲಿ ಉಪಸ್ತಿತರಿದ್ದರು. ವಿಜೇತ ತಂಡಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಪ್ರೊ. ಶ್ರೀಮತಿ ರೂಪಾಶ್ರೀ ಕೆ.ಎಸ್ ಸ್ವಾಗತಿಸಿದರು ಪ್ರೊ. ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮವನ್ನು ಪ್ರೊ.ಶ್ರೀಮತಿ ಜ್ಯೋತಿ ನಾಯಕ್ ನಿರ್ವಹಿಸಿದರು.























