ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜು ಸ್ನೇಹ ಸಮ್ಮಿಲನ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ರಜತ ಮಹೋತ್ಸವ ಹಾಗೂ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಪೂರ್ವಭಾವಿಯಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬೆಂಗಳೂರು ವಿಜಯನಗರದ ಆಶಾ ಪ್ರಕಾಶ ಶೆಟ್ಟಿ ಬಂಟರ ಸಭಾ ಭವನದಲ್ಲಿ ನಡೆಯಿತು.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ, ಉಪಾಧ್ಯಕ್ಷ ಪ್ರೌಢಶಾಲೆ ವಿಭಾಗದ ಹಳೆ ವಿದ್ಯಾರ್ಥಿ ಪ್ರಸಾದ್ ಶೆಟ್ಟಿ ಮುದ್ದುಮನೆ, ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕಡೆಕಾರ್‌ಮನೆ, ಉಪಾಧ್ಯಕ್ಷ ರಾಘವ್ ಮೆಂಡನ್, ಸಂಘಟನಾ ಕಾರ್ಯದರ್ಶಿ ಅಗ್ನೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಶಿರೂರ್,ಪ್ರತಾಪ್ ಶೆಟ್ಟಿ ಬಿಲ್ಲಾಡಿ ಹಳೆಯ ವಿದ್ಯಾರ್ಥಿಗಳಾದ ಅಮರನಾಥ್ ಶೆಟ್ಟಿ ಹೆಗ್ಗುಂಜೆ, ವಿಜಯನಾಥ್ ಹೆಗ್ಡೆ ಬಾರಾಳಿ, ಉಮೇಶ್ ಕುಂದರ್ ಮಂದಾರ್ತಿ, ಸುನಿಲ್ ಶೆಟ್ಟಿ ಮುದ್ದುಮನೆ, ಶ್ರೀನಿವಾಸ ಶೆಟ್ಟಿ,ಪ್ರಮೋದ್ ಶೆಟ್ಟಿ ಹೆಗ್ಗುಜೆ,ಪ್ರಮೋದ್ ಶೆಟ್ಟಿ ಮಂದಾರ್ತಿ, ಶರತ್ಚಂದ್ರ ಶೆಟ್ಟಿ, ಅಜಿತ್ ಶೆಟ್ಟಿ,ನವೀನ್ ಶೆಟ್ಟಿ ಭಾಗವಹಿಸಿದರು.

ಡಿ.25, 26ರಂದು ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಮಂದಾರ್ತಿ ಶಾಲೆ ಮೈದಾನದಲ್ಲಿ ನಡೆಯಲಿದೆ.