ಉಡುಪಿ: ದಿ. 21 -11 -2025ರ ಶುಕ್ರವಾರ ಬೆಳಗ್ಗೆ 9:00ಯಿಂದ ಮಧ್ಯಾಹ್ನ 1:00 ಯ ತನಕ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಬದಿ ಪ್ರಸಾದ್ ನೇತ್ರಾಲಯದ ಎದುರು ಇರುವ ಇಂಚರ ಸರ್ಜಿಕಲ್ ಕ್ಲಿನಿಕ್ ನ ಇಂದಿರಾ ಚಂದಿರ ಸಭಾಭವನದಲ್ಲಿ ಉಚಿತ ಎಲುಬು ಸಾಂದ್ರತೆ ಪರೀಕ್ಷೆ ಶಿಬಿರವನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಮುಖ್ಯವಾಗಿ ಹಿರಿಯ ನಾಗರಿಕರು, ಋತುಚಕ್ರ ನಿಂತಿರುವ ಮಹಿಳೆಯರು, ಕ್ಯಾನ್ಸರ್ ರೋಗಿಗಳು, ಹಾಗೂ ಇತರ ಚಿಕಿತ್ಸೆಯಲ್ಲಿರುವ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದೇ ಕಾರ್ಯಕ್ರಮದಲ್ಲಿ ಎಲುಬಿನ ಸಾಂದ್ರತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿಯನ್ನು ಡಾ. ವೈ ಸುದರ್ಶನ ರಾವ್ ಇವರು ಬೆಳಗ್ಗೆ 10 ಗಂಟೆಯಿಂದ 10: 20 ರ ತನಕ ನೀಡಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷರಾದ ಡಾಕ್ಟರ್ ಅಶೋಕ್ ಕುಮಾರ್ ಕಾಮತ್ ಇವರು ಭಾಗವಹಿಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ, ಇಂಚರ ಸರ್ಜಿಕಲ್ ಕ್ಲಿನಿಕ್ , ಶ್ರೀ ವೈ ಎಲ್ ಎನ್ ಜೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಹಾಗೂ ಇಂಟಾಸ್ ಫಾರ್ಮಾಸುಟಿಕಲ್ಸ್ ಇವರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.ಸರ್ವರಿಗೂ ಆದರದ ಸ್ವಾಗತ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7676799859.


















