ಉಡುಪಿ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಅವರಿಗೆ ತೌಳುವ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ

ತುಳುನಾಡ ರಕ್ಷಣಾ ವೇದಿಕೆ ರಿ., ತುಳುನಾಡ ಸೂರ್ಯ ಪತ್ರಿಕೆವತಿಯಿಂದ ಸಹಕಾರ ಸಪ್ತಾಹ-2025 ರ ಅಂಗವಾಗಿ ಸಹಕಾರಿ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಉಡುಪಿ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಪ್ರಸ್ತುತ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ರಾಜೇಶ್ ಹೆಗ್ಡೆ ಯವರಿಗೆ ತೌಳುವ ಸಹಕಾರಿ ರತ್ನಪ್ರಶಸ್ತಿಯನ್ನು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ಸ್ವಸ್ತಿ ಶೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠ ಮೂಡುಬಿದ್ರೆ(ಆಶೀರ್ವಚನ), ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ( ಶಿವ ದುರ್ಗಾ0ಭ ಮಠ, ಮಾಡೂರು ), ಶ್ರೀ ಕಿಶೋರ್ ಆಳ್ವ (ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕರು ನಿರ್ದೇಶಕರು, ಅದಾನಿ ಗ್ರೂಪ್ ), ಶ್ರೀ ವೇದವ್ಯಾಸ್ ಕಾಮತ್ ( ಶಾಸಕರು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ) ಶ್ರೀ ಎ. ಸಿ. ಭಂಡಾರಿ ( ಅಧ್ಯಕ್ಷರು, ಅಖಿಲ ಭಾರತ ತುಳು ಒಕ್ಕೂಟ ) ಶ್ರೀ ದೋಣಿ0ಜೆ ಗುತ್ತು ಪ್ರಮೋದ್ ಕುಮಾರ್ ರೈ (ಗಡಿಕಾರರು ಮತ್ತು ಅಧ್ಯಕ್ಷರು ಧರ್ಮವಲೋಕನ ) ಶ್ರೀ ಮೋಹನ0ಗಯ್ಯ ಸ್ವಾಮಿ ( ಅಧ್ಯಕ್ಷರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ) ಶ್ರೀ ರಾಘವೇಂದ್ರ ರಾವ್ ವಕೀಲರು ( ಅಧ್ಯಕ್ಷರು, ವಕೀಲರ ಘಟಕ ತುಳುನಾಡ ರಕ್ಷಣಾ ವೇದಿಕೆ), ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ( ಜಿಲ್ಲಾ ಅಧ್ಯಕ್ಷರು ಉಡುಪಿ ಜಿಲ್ಲೆ ತು. ರ. ವೆ.) ಶ್ರೀ ಕೃಷ್ಣ ಪಾಲೆಮಾರ್ ( ಮಾಜಿ ಸಚಿವರು ಕರ್ನಾಟಕ ಸರ್ಕಾರ )ಇವರುಗಳು ಉಪಸಿತರಿದ್ದರು.