ಉಡುಪಿ:ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಸ್ವಸಾಯ ಸಂಘದ ಕಳತ್ತೂರು ಒಕ್ಕೂಟದ ಸದಸ್ಯರ ಸಹಕಾರದೊಂದಿಗೆ ದೇವಸ್ಥಾನಕ್ಕೆ ನವೆಂಬರ್ 18 ರಂದು ನಡೆಯುವ ದೇವಸ್ಥಾನದ ಲಕ್ಷ ದೀಪೋತ್ಸವ ತಯಾರಿ ಆಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಸ್ವಚ್ಚತಾ ಅಭಿಯಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವ ತಂತ್ರಿ ಆಡಳಿತ ಸಮಿತಿ ಸದಸ್ಯರುಗಳಾದ ರಂಗನಾಥ್ ಭಟ್, ದಿವಾಕರ್ ಬಿ ಶೆಟ್ಟಿ ದಾಬ ನಿವಾಸ ಮಲ್ಲಾರು, ರಾಜೇಶ್ ಮೂಲ್ಯ ಕುತ್ಯಾರು ದೇವಳದ ಪ್ರಬಂಧಕ ಕೃಷ್ಣಮೂರ್ತಿ ಭಟ್ ಧರ್ಮಸ್ಥಳ ಸ್ವಸಾಯ ಗುಂಪಿನ ಸೇವಾ ನಿರತೆ ಸವಿತಾ ಶೆಟ್ಟಿ, ಪೈಯ್ಯರು, ಗ್ರಾಮ ಪಂಚಾಯತ್ ಸದಸ್ಯ ದಿವ್ಯ ಶೆಟ್ಟಿಗಾರ್ ಪುರುಷೋತ್ತಮ್ ಶೆಟ್ಟಿಗಾರ್ ದೇವಸ್ಥಾನದ ಸಿಬ್ಬಂದಿ ವರ್ಗ ಮುಂತಾದವರು ಭಾಗವಹಿಸಿ ಸ್ವಚ್ಛಗೊಳಿಸಿ ಸಹಕರಿಸಿದರು.



















