ಕಾರ್ಕಳ: ಯುವಕ ಮೃತ್ಯು

ಕಾರ್ಕಳ: ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಜೆಸಿಬಿ ಅಡಿಗೆ ನಡುವೆ ಸಿಲುಕಿ ಮೃತಪಟ್ಟ ಘಟನೆ ನ.13ರಂದು ಮಧ್ಯಾಹ್ನ ವೇಳೆ ಮಿಯ್ಯಾರು ಗ್ರಾಮದ ಇಂಡಸ್ಟೀಯಲ್ ಏರಿಯಾದಲ್ಲಿ ನಡೆದಿದೆ.

ಮೃತರನ್ನು ಚಿಂಟು ಚೌಹಾಣ್(26) ಎಂದು ಗುರುತಿಸಲಾಗಿದೆ. ಇವರು ವಿಶ್ವಾಸ್ ಗ್ಯಾರೇಜ್ನಲ್ಲಿ ಜೆಸಿಬಿ ಆಪರೇಟರ್ ಸಾಗರ್, ಜೆಸಿಬಿಯ ಮುಂದಿನ ಬಕೆಟ್ನ್ನು ಎತ್ತಿಹಿಡಿದಿದ್ದು, ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ ಪರಿಣಾಮ ಜೆಸಿಬಿ ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ್ ಜೆಸಿಬಿಯ ಮುಂದಿನ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿದರೆನ್ನ ಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.