ಕಾರ್ಕಳ: ತಾಯಿ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆಗೆ ಶರಣು.!

ಉಡುಪಿ: ತಾಯಿ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಕಾರ್ಕಳದಲ್ಲಿ ನಡೆದಿದೆ.

ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ಆತ್ಮಹತ್ಯೆಗೆ ಶರಣಾದ ಬಾಲಕ. ಸುಮಂತ್‌ನ ಮೊಬೈಲ್ ಹಾಳಾಗಿದ್ದು, ಅದನ್ನು ದುರಸ್ತಿಗೆ ನೀಡಲಾಗಿತ್ತು. ಈತ ಹೊಸ ಮೊಬೈಲ್ ಕೊಡಿಸಬೇಕೆಂದು ಅಮ್ಮನ ಬಳಿ‌ ಹಠ ಹಿಡಿದಿದ್ದ. ಕೆಲ ತಿಂಗಳು ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಭರವಸೆ ನೀಡಿದ್ದರು. ಅಮ್ಮನ ಭರವಸೆಯಿಂದ ಸಮಾಧಾನಗೊಳ್ಳದ ಸುಮಂತ್, ಬೇಸರಗೊಂಡು ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಅವರಿಗೆ ಸುಮಂತ್ ಏಕೈಕ ಮಗನಾಗಿದ್ದನು. ಇದ್ದ ಒಬ್ಬ ಮಗನು ಮೊಬೈಲ್ ನ ಆಸೆಗೆ ಬಿದ್ದು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.