ಉಡುಪಿ:ನ.15,16 ರಂದು ಸಾವಿತ್ರಿ ನಾಟ್ಯಶಾಲ(ರಿ) ಉಡುಪಿಯಲ್ಲಿ ದಶ ಹರ್ಷ ಪರ್ವೋತ್ಸವ – 2025

ಉಡುಪಿ:ದಿನಾಂಕ 15- 11 – 2025 & 16 – 11 – 2025 ರಂದು ಐವೈಸಿ ಆಡಿಟೋರಿಯಂ ಉಡುಪಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಶ್ರೀಮತಿ ಶ್ರೀವಿದ್ಯಾ ಸಂದೇಶ್ ರವರು ತಿಳಿಸಿದ್ದಾರೆ.

ನವೆಂಬರ್ 15 ರಂದು ಬೆಳಿಗ್ಗೆ 9.30ಕ್ಕೆ ಮೆರವಣಿಗೆ ಪ್ರಾರಂಭಗೊಂಡು 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಇವರ ಉಪಸ್ಥಿತಿಯಲ್ಲಿ ಎರಡು ದಿನಗಳ ದಶ ಹರ್ಷ ಪರ್ವೋತ್ಸವ ಎಂಬ ಭರತನಾಟ್ಯ ನೃತ್ಯೋತ್ಸವದ ಸಮಾರೋಪ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಇದರ ಅಧ್ಯಕ್ಷತೆಯನ್ನು ನಾಟ್ಯ ಮಯೂರಿ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಇವರು ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಅಂತರಾಷ್ಟ್ರೀಯ ಮಟ್ಟದ ಭರತನಾಟ್ಯ ಕಲಾವಿದೆ ಡಾ. ಅಪೂರ್ವ ಜಯರಾಮನ್, ಚೆನ್ನೈ ಇವರಿಂದ ಭರತನಾಟ್ಯ ಕಾರ್ಯಕ್ರಮ, ಬೆಂಗಳೂರೀನಾ ಕಾವ್ಯ ಕಾಶಿನಾಥನ್ ಇವರಿಂದ ಸನಾತನ ಧರ್ಮ ನೃತ್ಯ ಪ್ರಸ್ತುತಿ ಹಾಗೂ ಲಕ್ಷ್ಮೀ ಗುರುರಾಜ್ ಇವರಿಂದ ಸಪ್ತ ಮಹಾನಾಯಕಿ ಸತ್ಯಭಾಮ ನೃತ್ಯ ಪ್ರಸ್ತುತಿ ನಡೆಯಲಿದೆ.

ನವೆಂಬರ್ 16 ರಂದು ಬೆಳಿಗ್ಗೆ 10 ರಿಂದ ರಾಜ್ಯ ಮಟ್ಟದ ಭರತನಾಟ್ಯ ಗುಂಪು ನೃತ್ಯ ಸ್ಪರ್ಧೆ ನಡೆಯಲಿದೆ. ಅದೇ ದಿನ ಸಂಜೆ ಪ್ರಸಿದ್ಧ ನೃತ್ಯ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಅನೇಕ ನೃತ್ಯ ಕಲಾವಿದರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡೂ ದಿನವು ಸಂಸ್ಥೆಯ ಹಿರಿಯ ಹಾಗು ಕಿರಿಯ ವಿದ್ಯಾರ್ಥಿಗಳಿಂದ ನೃತ್ಯ ಹರ್ಷೋತ್ಸವ ಹಾಗೂ ನೃತ್ಯಾಮೃತ ಕಾರ್ಯಕ್ರಮ ನಡೆಯಲಿದೆ.