ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುಂದಾಪುರದ ಸಂಶೋಧನಾ ಘಟಕದ ವತಿಯಿಂದ, ಸೈಬರ್ ಇಮ್ಯುನಿಟಿ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಶ್ರೇಷ್ಠತಾ ಕೇಂದ್ರದ ಉದ್ಘಾಟನಾ ಸಮಾರಂಭವು 12 ನವೆಂಬರ್ 2025ರಂದು ಬೆಳಿಗ್ಗೆ 10:30ಕ್ಕೆ ಕಾಲೇಜು ಆವರಣದಲ್ಲಿ ನೆರವೇರಿತು.
ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸುತ್ತಾ ಮುಖ್ಯ ಅತಿಥಿಯಾಗಿಬಂದ ಶ್ರೀ ವಿಜಯಂತ್ ಗೌರ್, ಡೈರೆಕ್ಟರ್ ಜನರಲ್, ಸೈಬರ್ ಸೆಕ್ಯುರಿಟಿ ಅಸೋಸಿಯೇಷನ್ ಆಫ್ ಇಂಡಿಯಾ (ದೆಹಲಿ), ಅವರು ಸೈಬರ್ ಜಾಗೃತಿ, ಡಿಜಿಟಲ್ ರಕ್ಷಣಾ ವ್ಯವಸ್ಥೆ ಹಾಗೂ ಡಿಜಿಟಲ್ ಫರೆನ್ಸಿಕ್ಸ್‌ನ ನೈಜ ಜಗತ್ತಿನ ಲ್ಲಿ ಆಗುಹೋಗುಗಳ ಕುರಿತಂತೆ ಮಾರ್ಮಿಕವಾಗಿ ಮಾತನಾಡಿದರು.
ಡಾ. ಇಂದ್ರ ವಿಜಯ್ ಸಿಂಗ್, (ಸಂಶೋಧನೆ ವಿಭಾಗದ ಡೀನ್) ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ , ಹೊಸ ಸೆಂಟರ್ ನ ಮಹತ್ವವನ್ನು ತಿಳಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಫರೆನ್ಸಿಕ್ಸ್‌ನ ಮಹತ್ವವನ್ನು ಒತ್ತಿಹೇಳಿದರು.

ಡಾ. ಎಸ್. ಎನ್. ಭಟ್, ಅಕಾಡೆಮಿಕ್ ಡೈರೆಕ್ಟರ್ ಐ ಎಂ ಜೆ ಇನ್ಸ್ಟಿಟ್ಯೂಶನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ , ತಮ್ಮ ಅಭಿನಂದನೆ ತಿಳಿಸಿದರಲ್ಲದೆ ಈ ಸೈಬರ್ ಸೆಂಟರ್, ಸೈಬರ್ ಕ್ಷೇತ್ರದ ಸರಕಾರದ ವಿಭಾಗಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ನೋಡಲ್ ಸೆಂಟರ್ ಆಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಡಾ. ರಾಮಕೃಷ್ಣ ಹೆಗ್ಡೆ, ಪ್ರಾಂಶುಪಾಲರು ಹಾಗೂ ಡಾ. ಮೆಲ್ವಿನ್ ಡಿಸೋಜಾ, ಉಪಪ್ರಾಂಶುಪಾಲರು, ತಮ್ಮ ಭಾಷಣಗಳಲ್ಲಿ ಪ್ರಯೋಗಾಲಯದ ಸ್ಥಾಪನೆಗೆ ಕೈಜೋಡಿಸಿದವರ ಪ್ರಯತ್ನಗಳನ್ನು ಹೊಗಳಿದರು.
ಕಾರ್ಯಕ್ರಮವು ಕೀರ್ತನಾ, ರಶ್ಮಿ ಹಾಗೂ ಹೇಮಾ ಅವರ ಪ್ರಾರ್ಥನೆಯಿಂದ ಆರಂಭಗೊಂಡಿತು. ಪ್ರೊ.ಶ್ರೀನಿಧಿ ಎನ್ ರವರು ಸ್ವಾಗತಿಸಿದರು ಮತ್ತು ಮುಖ್ಯ ಅತಿಥಿ ಗಳನ್ನು ಪರಿಚಯಿಸಿದರು
ಪ್ರೊ. ಲಕ್ಷ್ಮಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಶ್ರೀ ಸೃಜನ್ ಕೆ ಸಹಕಾರ ನೀಡಿದರು. ಅಂಜಲಿ ಯವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.


















