ಸ್ಯಾಂಡಲ್‌ವುಡ್ ನಟ ದರ್ಶನ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಸಿಗುತ್ತಿದೆ. ಚಿತ್ರತಂಡ ನಿನ್ನೆಯಷ್ಟೇ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು ಬಿಡುಗಡೆ ಮಾಡಿತ್ತು . ಇದೀಗ ಮತ್ತೊಂದು ಹೊಸ ಪೋಸ್ಟರ್ ಔಟ್ ಮಾಡಿದೆ. ದರ್ಶನ್ ಹೊಸ ಲುಕ್ ಕಂಡು ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ದಿ ಡೆವಿಲ್ ಹೊಸ ಹಾಡು:
ಚಿತ್ರತಂಡವು ನವೆಂಬರ್ 16 ರಂದು “ದಿ ಡೆವಿಲ್”ನ ಹೊಸ ಹಾಡಿಗೆ ಸಜ್ಜಾಗಿರಿ ಎಂದು ಪೋಸ್ಟರ್ ಜೊತೆ ಬಿಗ್ ಅಪ್‌ಡೇಟ್ ಕೊಟ್ಟಿದೆ.
ಬಹು ದಿನಗಳಿಂದ ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿದ್ದ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗಿರ್ಬೇಕು ಹಾಡು ರಿಲೀಸ್ ಆದ ಕೇವಲ ಅರ್ಧಗಂಟೆಯಲ್ಲಿ 5ಲಕ್ಷ ವ್ಯೂವ್ಸ್ ಪಡೆದುಕೊಂಡಿತ್ತು, ಇನ್ನು ಫ್ಯಾನ್ಸ್ ದಿ ಡೆವಿಲ್ ನ ಹೊಸ ಹಾಡಿಗೆ ಕಾತುರದಿಂದ ಕಾಯುತ್ತಿದ್ದಾರೆ.
ಡಿ.12ಕ್ಕೆ ಡೆವಿಲ್ ಸಿನಿಮಾ:
ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳನ್ನು ದರ್ಶನ್ ಮುಗಿಸಿಕೊಟ್ಟಿದ್ದಾರೆ. ತಂಡವು ಸಿನಿಮಾದ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದೆ.
ಡೆವಿಲ್ ಚಿತ್ರಕ್ಕೆ ಸಂಗೀತವನ್ನು ದಿ ಡೆವಿಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.















