ಕಾರ್ಕಳ: ನಲ್ಲೂರು ಹತ್ತಿರದ ತೋಟದಲ್ಲಿ ಅಕ್ರಮವಾಗಿ ದನದ ಹತ್ಯೆ ನಡೆಯುತ್ತಿದೆ ಎಂಬ ಸುಳಿವಿನ ಮೇರೆಗೆ ಹಿಂದೂ ಕಾರ್ಯಕರ್ತರ ಮಾಹಿತಿ ಆಧಾರಿಸಿ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದರು. ದಾಳಿಯಲ್ಲಿ ಸುಮಾರು 70 ಕೆ.ಜಿ ದನದ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಅಶ್ರಫ್ ಘಟನೆಯ ಬಳಿಕ ಪರಾರಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರು ನಡೆಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯ ಹಿಂದೂ ಕಾರ್ಯಕರ್ತರ ಸುಳಿವಿನಿಂದಲೇ ಈ ಅಕ್ರಮ ಬಯಲಾಗಿರುವುದಾಗಿ ತಿಳಿದುಬಂದಿದೆ.


















