ಉಡುಪಿ: ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ

ಉಡುಪಿ: ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ನಡೆಯುವ ವಾಯ್ಸ್ ಆಪ್ ಚಾಣಕ್ಯ 2025 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 8ರ ಆಯ್ಕೆ ಪ್ರಕ್ರಿಯೆ ಉಡುಪಿ ನೈಸ್ ಕಂಪ್ಯೂಟರ್ ಎಜುಕೇಷನ್ ಅವರ ಸಹಯೋಗದೊಂದಿಗೆ ನ. 9ರಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಪಿಪಿಸಿ ಬಸ್ ಸ್ಟ್ಯಾಂಡ್ ಎದುರಿನ ಸಿಮಾಜ್ ಕಾಂಪ್ಲೆಕ್ಸ್, 2ನೇ ಮಹಡಿಯಲ್ಲಿರುವ ನೈಸ್ ಕಂಪ್ಯೂಟರ್ ಎಜುಕೇಶನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿವರ:
ವಾಯ್ಸ್ ಆಪ್ ಚಾಣಕ್ಯ -2025

ಸೀಸನ್ -8

ರಾಜ್ಯಮಟ್ಟದ
ಕರೋಕೆ ಸಂಗೀತ ಸಮರ.

ಫೈನಲ್ ವಿಜೇತರಿಗೆ

  • ಪ್ರಥಮ: 10000/- + ಪ್ರಮಾಣ ಪತ್ರ+ ಟ್ರೋಪಿ
  • ದ್ವಿತೀಯ: 6000/- + ಪ್ರಮಾಣಪತ್ರ+ ಟ್ರೋಪಿ
  • ತೃತೀಯ: 3000/- + ಪ್ರಮಾಣಪತ್ರ + ಟ್ರೋಪಿ.

ಸಮದಾನಕರ ಬಹುಮಾನ:

3 ಜನ ಗಾಯಕರಿಗೆ

  • 1000* /
  • 1000* /-
  • 1000* /-

ಹಾಗೂ 3ಜನರಿಗೆ ಮೆಚ್ಚುಗೆ ಪ್ರಮಾಣಪತ್ರ ಹಾಗೂ ಆಕಷ೯ಕ ಗಿಪ್ಟ ಹ್ಯಾಂಪರ್

ಇದರ ಆಯ್ಕೆ ಪ್ರಕ್ರಿಯೆ ‘ನೈಸ್ ಕಂಪ್ಯೂಟರ್ ಎಜುಕೇಶನ್ ಉಡುಪಿ’ ಇವರ ಸಹಯೋಗದೊಂದಿಗೆ ನಡೆಯಲಿದೆ.

ದಿನಾಂಕ: 09-11-2025
ಸಮಯ: ಬೆಳಿಗ್ಗೆ 10 ರಿಂದ 12:30 ರ ತನಕ

ಸ್ಥಳ: ನೈಸ್ ಕಂಪ್ಯೂಟರ್ ಸೆಂಟರ್,
ಆಕ್ಸಿಸ್ ಬ್ಯಾಂಕಿನ ಮೇಲ್ಗಡೆ, ಸಿಮಾಜ್ ಕಾಂಪ್ಲೆಕ್ಸ್, 2ನೇ ಮಹಡಿ, ಪಿಪಿಸಿ ಬಸ್ ಸ್ಟ್ಯಾಂಡ್ ಎದುರು, ಉಡುಪಿ

ಸೂಚನೆ: ಈ ಹಿಂದೆ ನಡೆದ ವಾಯ್ಸ್ ಚಾಣಕ್ಯ ಸೀಸನ್ 1ರಿಂದ 7 ರ ತನಕ ನಡೆದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಬಂದವರು ಆಡಿಷನ್ ನಲಿ ಭಾಗವಹಿಸುವಂತಿಲ್ಲ.

  • ಯಾವುದೇ ವಯಸ್ಸಿನ ಮಿತಿ ಇಲ್ಲ
  • ನೊಂದಣಿ ಶುಲ್ಕ 250/- ಯನ್ನು ಗೂಗಲ್ ಪೇ 9900408545 ಅಥವಾ ಸ್ಥಳದಲ್ಲಿ ಪಾವತಿಸಬಹುದು.
  • ಹಿನ್ನಲೆಗಾಯಕರು,ಟಿವಿ ರಿಯಾಲಿಟಿ ಶೊನಲ್ಲಿ ಭಾಗವಹಿಸಿದವರು,ಲೈವ್ ಆಕೆ೯ಸ್ಟ್ರಾ ಸಿಂಗರ್ ,ಸಂಗೀತ ಶಿಕ್ಷಕರು ಬಾಗವಹಿಸುವಂತಿಲ್ಲ.
  • ಕರೋಕೆಯನ್ನ ಬಳಸಿ ಹಾಡಬೇಕು
  • ಆಡಿಶನಲ್ಲಿ ಆಯ್ಕೆ ಆದವರಿಗೆ ಸೆಮಿ ಫೈನಲ್ ರೌಂಡ್ ಮತ್ತು ಫೈನಲ್ ರೌಂಡ್ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಉದಯ್ ಕುಮಾರ್ ಶೆಟ್ಟಿ
9900408545