ಮೂಡ್ಲಕಟ್ಟೆ: ನವೋನ್ಮೇಶ 2025ರ ಸಮಾರೋಪ ಸಮಾರಂಭ

ಕುಂದಾಪುರ: ಐ ಎಮ್ ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆ ಇಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು‌ ಸ್ಪರ್ದೆ ನವೋನ್ಮೇಶ 2025 ಇದರ ಸಮಾರೋಪ‌ ಸಮಾರಂಭ ತಾರಾ ಮೆರುಗಿನೊಂದಿಗೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸು ಫ಼್ರಮ್ ಸೋ ಖ್ಯಾತಿಯ ನಟ ಶನೀಲ್‌ ಗೌತಮ್ ಅವರು ತಮ್ಮ ವಿಧ್ಯಾರ್ಥಿ ಜೀವನವನ್ನು ಮೆಲುಕು‌ಹಾಕುತ್ತ, ಶಿಕ್ಷಕರ ಮಾರ್ಗದರ್ಶನವನ್ನು ನಿರ್ಲಕ್ಷಿಸದೆ ಎಲ್ಲ ಕ್ಷೇತ್ರದಲ್ಲು ತಮ್ಮನ್ನು ತಾವು ತೊಡಗಿಸಿಕೊಳ್ಳಿ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಈ ಟಿವಿ ಎದೆ ತುಂಬಿ ಹಾಡಿದೆನು ಹಾಗೂ ಸರಿಗಮಪ ಖ್ಯಾತಿಯ ಶ್ರೀಮತಿ ದೀಕ್ಷಾ ರಾಮಕೃಷ್ಣ ಅವರು ಮಾತನಾಡಿ ಪಾಠದ ಜೊತೆಗೆ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆಶಿಸಿದರು. ಸಭಾ ಕಾರ್ಯಕ್ರಮದ ಮೊದಲು ಇವರು ತಮ್ಮ ಸುಮಧುರ ಗಾಯನದ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ ಅವರು ಮಾತನಾಡಿ ಈ‌‌ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ, ಪದವಿ ಜೊತೆಗೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸರಕಾರಿ ನೌಕರಿ ತಮ್ಮದಾಗಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ ಆ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನವೋನ್ಮೇಶ2025 ನಾಲ್ಕು ವಿಭಾಗಗಳಲ್ಲಿ ಸ್ಪರ್ದೆಗಳು ನಡೆದಿದ್ದು ವಾಣಿಜ್ಯ, ವಿಜ್ಞಾನ, ಸಾಂಸ್ಕ್ರತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಹಲವು ಸ್ಪರ್ದೆಗಳನ್ನು ನಡೆಸಿ ಪ್ರತಿ ವಿಭಾಗದಲ್ಲೂ ಚಾಂಪಿಯನ್ ಪ್ರಶಸ್ತಿ ನೀಡಿದ್ದು ಕ್ರೀಡೆಯನ್ನು ಹೊರತುಪಡಿಸಿ ಉಳಿದ ಮೂರು ವಿಭಾಗದಲ್ಲಿ ಅತ್ಯುತ್ತಮ ಅಂಕಗಳಿಸಿದ ಕಾಲೇಜುಗಳಿಗೆ ಓವರಾಲ್ ವಿನ್ನರ್ ಹಾಗೂ ರನ್ನರ್ ಪ್ರಶಸ್ತಿ ನೀಡಲಾಯಿತು.

ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿ ನವೋನ್ಮೇಶ 2025ರ ಚಾಂಪಿಯನ್ ಆಗಿ ವಿನ್ನರ್ ಟ್ರೋಫಿ ಹಾಗೂ ರೂ 22,222 ನಗದು ಬಹುಮಾನ ತಮ್ಮದಾಗಿಸಿಕೊಂಡರೆ, ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜು, ಹೆಮ್ಮಾಡಿ ರನ್ನರ್ ಆಗಿದ್ದು ರೂ 15,555 ನಗದುಬಹುಮಾನ ಪಡೆದುಕೊಂಡರು. ಕಬಡ್ಡಿ ಪ್ರಥಮ ಸ್ಥಾನವನ್ನು ಟ್ರೋಫಿ ಹಾಗೂ ನಗದು 10,000 ದೊಂದಿಗೆ ಎನ್ ಎಮ್ ಸಿ ಸುಳ್ಯ ತನ್ನದಾಗಿಸಿಕೊಂಡಿತು, ಎನಪೋಯ ಪಿಯು ಕಾಲೇಜ್ ಮಂಗಳೂರು 7000 ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಹಾಗೂ ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ 5000 ನಗದು ಜೊತೆಗೆ ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದ ಪ್ರಮುಖ ಸಂಯೋಜಕರಾದ ಪ್ರೊಫೆಸರ್ ಸ್ವರ್ಣ ರಾಣಿ , ಪ್ರೊಫೆಸರ್ ಅರ್ಚನ ಉಪಧ್ಯಾಯ, ಪ್ರೊಫೆಸರ್ ಸೂಕ್ಷ್ಮ ಅಡಿಗ ಹಾಗೂ ಶ್ರೀ ಪ್ರವೀಣ್ ಖಾರ್ವಿ ವಿಜೇತರ ಪಟ್ಟಿ ಘೋಷಿಸಿದರು. ಎಮ್ ಐ ಟಿ ಕೆ ಕಾಲೇಜಿನ ಐ ಕ್ಯು ಎ ಸಿ ಹೆಡ್ ಡಾ.ನಿಖಿಲ ಪೈ ಸ್ವಾಗತಿಸಿ, ಎಮ್ ಸಿ ಎನ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊಫೆಸರ್ ರೂಪಶ್ರೀ ವಂದಿಸಿದರು. ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಕಾರ್ತಿಕೇಯನ್ ನವೋನ್ಮೇಶ 2025ರ ವರದಿ ವಾಚಿಸಿದರು. ಪ್ರಾಧ್ಯಾಪಕರುಗಳಾದ ಪ್ರೊಫೆಸರ್ ಶ್ರೀನಿಧಿ, ಪ್ರೊ.ಸಿಂಚನ ಹಾಗೂ ಪ್ರೊ.ಐಶ್ವರ್ಯ ಅತಿಥಿಗಳ ಪರಿಚಯ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡಮಿಕ್ ಡೈರೆಕ್ಟರ್ ಡಾ. ಎಸ್ ಎನ್ ಭಟ್, ಎಮ್ ಐ ಟಿ ಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ , ಏಮ್ ಸಿ ಎನ್ ಪ್ರಾಂಶುಪಾಲೆ ಪ್ರೊಫೆಸರ್ ಜೆನಿಫ಼ರ್ ಫ಼್ರೀಡಾ ಮೆನೇಜಸ್, ಐ ಎಮ್ ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್, ಅಲೈಡ್ ಹೆಲ್ಥ್ ಸೈನ್ಸ್ ಡೀನ್ ಡಾ.ಪದ್ಮಚರಣ್ ಹಾಗೂ ಅಲೈಡ್ ಸೈನ್ಸ್ ಪ್ರಾಂಶುಪಾಲೆ ಪ್ರೊಫೆಸರ್ ಹೇಮಲತ , ಹಾಗೂ ಸಂಸ್ಥೆಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಪರ್ದೆಗೆ ಆಗಮಿಸಿದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.