ಬ್ರಹ್ಮಾವರ: ಎಸ್ಎಂಎಸ್ ಫೆಸ್ಟ್ ಸಮಾರೋಪ ಸಮಾರಂಭ

ಬ್ರಹ್ಮಾವರ: ಎಸ್ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ ಎಸ್ಎಂಎಸ್ ಫೆಸ್ಟ್‌ನ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಸಂಚಾಲಕರಾದ ಫಾ. ಎಂ. ಸಿಮಥಾಯಿ ಅವರು ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳು “ಭಾವಿಯ ಒಳಗಿನ ಕಪ್ಪೆಯಾಗದೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವಿಸ್ತರಿಸಬೇಕು” ಎಂದು ಅವರು ಹಿತನುಡಿಯನ್ನು ಹೇಳಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬ್ರಹ್ಮಾವರ ವಲಯದ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿಯಾದ ಶ್ರೀಮತಿ ಉಮಾ ಅವರು ಭಾಗವಹಿಸಿ, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಬೆಳಗಿಸಿಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಖಜಾಂಜಿಯಾದ ಹರಿಕ್ ಡಿಸೋಜಾ, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯರಾದ ವಿಷ್ಣುದಾಸ ಉಪಾಧ್ಯ, ಹಾಗೂ ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವತ್ಸಲ ಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿದರಿಂದ ಎಲ್ಲಾ ಅತಿಥಿ ಅಭ್ಯಾಗತರನ್ನ ಕಾಲೇಜಿನ ಮ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಇವರು ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ಲಘುವಾಗಿ ವಿವರವನ್ನು ಪ್ರಾಸ್ತ ವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ರಾಘವೇಂದ್ರ ಐತಾಳ್ ಅವರು ನೆರವೇರಿಸಿದರು. ಸಂಚಾಲಕೆಯಾಗಿ ಶ್ರೀಮತಿ ಜಾನ್ಸಿ ಬಾರ್ನೆಸ್ ಕಾರ್ಯನಿರ್ವಹಿಸಿ, ವಂದನೆಗಳನ್ನು ಸಲ್ಲಿಸಿದರು. ವಿಜೇತರ ಪಟ್ಟಿಯನ್ನು ಕು. ಚೈತ್ರ ಅವರು ವಾಚಿಸಿದರು.

ಈ ಫೆಸ್ಟ್‌ನಲ್ಲಿ 25 ಪ್ರೌಢಶಾಲೆಗಳ 302 ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ನಗದು ಬಹುಮಾನಗಳನ್ನು ಪಡೆದರು.