ಉಡುಪಿ: ರಾಜ್ಯ ಆಯುಕ್ತರ ಕಛೇರಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಬೆಂಗಳೂರು ಇವರು ವಿಕಲಚೇತನ ವ್ಯಕ್ತಿಗಳು ಸಹಸ್ರಾರು ವಿಕಲಚೇತನರ ವ್ಯಕ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಡಿಸೆಂಬರ್ 5 ರಿಂದ 7 ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ನೇರಳೆ ಉತ್ಸವ- ಕರ್ನಾಟಕ 2025 ( (National Purple Fest- Karnataka 2025) ಕಾರ್ಯಕ್ರಮವನ್ನು ಆಚರಿಸುತ್ತಿದೆ.
ವಿಕಲಚೇತನ ವ್ಯಕ್ತಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ
ಶ್ರಮಿಸುತ್ತಿರುವ ಹಾಗೂ ಸಾಧನೆ ಮಾಡಿದ ವಿಕಲಚೇತನ ವ್ಯಕ್ತಿಗಳನ್ನು ಈ ಕಾರ್ಯಕ್ರಮದ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲು
ಚಿಂತಿಸಲಾಗಿದ್ದು, ರಾಯಭಾರಿಗಳ ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ವಿಕಲಚೇತನ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು 2025ರ ನವೆಂಬರ್ 16 ರೊಳಗೆ ಗೂಗಲ್ ಫಾರ್ಮ್
https://forms.gle/7pMqcgCySATFvNVm6 ಮೂಲಕ ಅಥವಾ ಪರ್ಪಲ್ ಫೆಸ್ಟ್-ರಾಯಭಾರಿ ಆಯ್ಕೆ ಸಮಿತಿ ಕೇರ್ ಆಫ್
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತರ ಕಛೇರಿ ಸಂಖ್ಯೆ: 55, 2ನೇ ಮಹಡಿ ಕೆಎಸ್ಡಿಬಿ ಕಟ್ಟಡ, “ಅಭಯ ಕಾಂಪ್ಲೆಕ್ಸ್”,
ಶೇಷಾದ್ರಿಪುರಂ ಬೆಂಗಳೂರು-560020, ದೂರವಾಣಿ ಸಂಖ್ಯೆ: (080) 23462625, 23462029, 23462659 ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಉಡುಪಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು, ಸಿ ಬ್ಲಾಕ್, ತಳಮಹಡಿ, ಜಿಲ್ಲಾ
ಪಂಚಾಯತ್ ವಿಭಾಗ, ಜಿಲ್ಲಾಧಿಕಾರಿ ಕಛೇರಿ, ರಜತಾದ್ರಿ, ಮಣಿಪಾಲ ಅಥವಾ ದೂರವಾಣಿ ಸಂಖ್ಯೆ: 0820-2574810 ಅನ್ನು
ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.


















