ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ
ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ವಿಭಾಗದ ವಿದ್ಯಾರ್ಥಿನಿಯಾದ
ಅನನ್ಯಾ ಭಟ್ ಇವರು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯ ಮಟ್ಟದ ಅಂತರ್ ಕಾಲೇಜು ಕರಾಟೆ ಪಂದ್ಯಾವಳಿ 2025-26 ರ ಮಹಿಳೆಯರ 55 ಕೆಜಿ ವಿಭಾಗದ ಕುಮಿಟೆಯಲ್ಲಿ ರನ್ನರ್ ಆಫ್ ಬಹುಮಾನವನ್ನು ಪಡೆದಿರುತ್ತಾರೆ.
ಈ ಪಂದ್ಯಾವಳಿಯು ಬೆಂಗಳೂರಿನ ಆರ್ ವಿ ಇನ್ಸ್ಟಿಟ್ಯೂಟ್ ಆಫ್
ಮ್ಯಾನೇಜ್ಮೆಂಟ್ ನಲ್ಲಿ ದಿನಾಂಕ 31 ಅಕ್ಟೋಬರ್ ಮತ್ತು 1
ನವಂಬರ್ ರಂದು ನಡೆಯಿತು.
ವಿದ್ಯಾರ್ಥಿನಿಯ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು
ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.


















