ಕಾರ್ಕಳ ಕ್ರೈಸ್ಟ್ಕಿಂಗ್‌ನ ಅಭಿಷ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಸರಕಾರಿ
ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಇವರ ಸಹಯೋಗದಲ್ಲಿ
ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು
ಮಟ್ಟದ ಪ್ರಾಥಮಿಕ ಶಾಲಾ 14 ರ ವಯೋಮಿತಿಯ ವಿದ್ಯಾರ್ಥಿಗಳ
ಕ್ರೀಡಾಕೂಟದಲ್ಲಿ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ
ಶಾಲೆಯ ಎಂಟನೇ ತರಗತಿಯ ಅಭಿಷ್ ೪೦೦ ಮೀ ಓಟದಲ್ಲಿ ಪ್ರಥಮ
ಸ್ಥಾನ ಮತ್ತು 80 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ
ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.