ನಂದಿನಿ ತುಪ್ಪ ಬೆಲೆ ಪ್ರತಿ ಲೀಟರ್​ಗೆ 90 ರೂಪಾಯಿ ಏರಿಕೆ: ಇಂದಿನಿಂದಲೇ ಜಾರಿ!

ಬೆಂಗಳೂರು: ಜಿಎಸ್ ಟಿ ಇಳಿಕೆ ಖುಷಿಯಲ್ಲಿದ್ದ ರಾಜ್ಯದ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಶಾಕ್ ನೀಡಿದೆ. ನಂದಿನಿ ತುಪ್ಪದ ದರ ಪ್ರತಿ ಲೀಟರ್​ಗೆ 90 ರೂಪಾಯಿ ಏರಿಕೆ ಮಾಡಿದೆ.

ಇತ್ತೀಚಿಗಷ್ಟೇ ಜಿಎಸ್​ಟಿ ದರ ಇಳಿಕೆಯಾದ ನಂತರ ಕೆಎಂಎಫ್ ಹಾಲು ಉತ್ಪನ್ನಗಳ ದರ ಇಳಿಕೆ ಮಾಡಿತ್ತು. ನಂದಿನಿ ತುಪ್ಪದ ಬೆಲೆ 40 ರೂಪಾಯಿ ಇಳಿಕೆಯಾಗಿತ್ತು. ಆದರೆ, ಈಗ ಗ್ರಾಹಕರಿಗೆ ಬಿಸಿ ತುಪ್ಪವಾಗಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ನಂದಿನಿ ತುಪ್ಪಕ್ಕೆ ಈ ಹಿಂದೆ 1 ಕೆಜಿಗೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ಜಿಎಸ್​ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನೆಲೆ ದಿಢೀರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ನೂತನ ದರ ಹೀಗಿವೆ:

50 ಎಂಎಲ್​​ – 47
100 ಎಂಎಲ್ – 75
200 ಎಂಎಲ್ – 155–165
500 ಎಂಎಲ್ – 350–360
1 ಲೀಟರ್​ (1000 ಎಂಎಲ್) – 700–720